ಶಿವಮೊಗ್ಗ: ‘ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ ಸಹ್ಯಾದ್ರಿ ಶಾಖೆಯಿಂದ ಮೇ 8ರಿಂದ 10ರವರೆಗೆ ತಜ್ಞ ವೈದ್ಯರ ರಾಜ್ಯಮಟ್ಟದ ಸಮ್ಮೇಳನ ಕಾಪಿಕಾನ್– 2026 ಆಯೋಜಿಸಲಾಗಿದೆ’ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಬಿ.ಸಿ.ಪೃಥ್ವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದಾದ್ಯಂತ 2,000ಕ್ಕೂ ಹೆಚ್ಚು ವೈದ್ಯರು ಹೆಸರು ನೋಂದಾಯಿಸಿದ್ದು, ಮೂರು ದಿನ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನೂತನ ಆವಿಷ್ಕಾರ, ಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಉಪನ್ಯಾಸ– ಚರ್ಚೆ, ಕಾರ್ಯಾಗಾರ ನಡೆಯಲಿವೆ. ಮೇ 8ರಂದು ಬೆಳಿಗ್ಗೆ 9ರಿಂದ 11ರವರೆಗೆ ಶಿವಮೊಗ್ಗದ ಜನತೆಗೆ ತುರ್ತು ಜೀವರಕ್ಷಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಮೇ 8ರ ಸಂಜೆ 5ಕ್ಕೆ ಸಂಸದ ಡಾ.ಸಿ.ಎನ್. ಮಂಜುನಾಥ್ ಸಮಾವೇಶದ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಬಿ.ಮಹಾಲಿಂಗಪ್ಪ, ಡಾ.ಜಿ.ನರಸಿಂಹಲು, ಡಾ.ಜ್ಯೋತಿರ್ಮಯ ಪಾಲ್, ಡಾ.ನಂದಿನಿ ಚಟರ್ಜಿ, ಡಾ.ವಿ.ವಿರೂಪಾಕ್ಷಪ್ಪ , ಡಾ.ಎಸ್.ನಾಗೇಂದ್ರ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಬಿ.ಹೆಗಡೆ ಮಾತನಾಡಿದರು. ಖಜಾಂಚಿ ಡಾ.ಬಿ.ಆರ್.ಮಹೇಶ್ ಮೂರ್ತಿ, ಡಾ.ಶ್ರೀಕಾಂತ್ ಎನ್. ಹೆಗಡೆ, ಡಾ.ಕೆ.ಆರ್.ರವೀಶ್, ಡಾ.ಎಸ್.ಪರಮೇಶ್ವರ್, ಡಾ.ಸಿ.ಎಲ್.ಅರವಿಂದ್, ಡಾ.ಪ್ರವೀಣ್ ದೇವರಭಾವಿ, ಡಾ.ರತ್ನಾಕರ್, ಡಾ.ಪಿ.ಕೆ. ಪೈ, ಡಾ.ಡಿ.ಜಿ. ಶಿವಕುಮಾರ್, ಡಾ.ಈಶ್ವರಪ್ಪ, ಡಾ.ರಮ್ಯಾ ಭಟ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-42-172300270

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.