ಸಾಗರ: ‘ಇ– ಸ್ವತ್ತು ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬರುತ್ತಿವೆ. ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಸಹಿಸಲು ಸಾಧ್ಯವಿಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.

ನಗರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ತಮ್ಮ ಆಸ್ತಿಗೆ ಕಂದಾಯ ಪಾವತಿಸಿ ಇ–ಆಸ್ತಿ ನೋಂದಣಿ ಮಾಡಿಸಲು ಕಚೇರಿಗೆ ಬರುವ ಜನರನ್ನು ಪದೇ ಪದೆ ಅಲೆಯುವಂತೆ ಮಾಡಬೇಡಿ. ಇಲ್ಲಸಲ್ಲದ ಕಾನೂನಿನ ತೊಡಕುಗಳನ್ನು ಹೇಳಿ ಸತಾಯಿಸಿದರೆ ಮುಂದಿನ ದಿನಗಳಲ್ಲಿ ಶಿಸ್ತುಕ್ರಮದ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.

‘ನಗರಸಭೆಗೆ ಚುನಾಯಿತ ಸದಸ್ಯರು ಇಲ್ಲ ಎಂದ ಮಾತ್ರಕ್ಕೆ ಜನರ ಕೆಲಸದಲ್ಲಿ ನಿಧಾನಗತಿ ತೋರಬಹುದು ಎಂಬ ಧೋರಣೆ ಯಾರಿಗಾದರೂ ಇದ್ದರೆ ಅಂತಹವರು ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು’ ಎಂದು ತಾಕೀತು ಮಾಡಿದರು.

‘ನಗರದ ಮಾರ್ಕೆಟ್ ರಸ್ತೆ ವಿಸ್ತರಣೆ ಕಾರ್ಯವನ್ನು ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಮಾಡಬೇಕು ಎಂಬ ಉದಾರ ನಿಲುವು ತಾಳಿದ್ದು ತಪ್ಪು ಅನಿಸುತ್ತಿದೆ. ಸ್ಥಳೀಯ ಆಡಳಿತದೊಂದಿಗೆ ಅಲ್ಲಿನ ಕೆಲವರು ಚೆಲ್ಲಾಟವಾಡುತ್ತಿದ್ದಾರೆ. ಕೊನೆಯ ಬಾರಿಗೆ ಅಂತಹವರಿಗೆ ನೋಟಿಸ್ ನೀಡಿ ಅದಕ್ಕೂ ಬಗ್ಗದಿದ್ದರೆ ಕಾನೂನಿನ ಪ್ರಕಾರ ವಿಸ್ತರಣೆ ಕಾರ್ಯ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಆಶ್ರಯ ನಿವೇಶನ ವಿತರಣೆಗೆ ಯಡಗಳಲೆಯಲ್ಲಿ 20 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗೆ ಈ ಜಾಗವನ್ನು ಮಂಜೂರು ಮಾಡುವಂತೆ ಪ್ರಸ್ತಾವ ಕಳುಹಿಸಿ ಅಗತ್ಯ ಪ್ರಕ್ರಿಯೆ ಪೂರೈಸುತ್ತಿದ್ದಂತೆ ಆಶ್ರಯ ಸಮಿತಿ ಮೂಲಕ ನಿವೇಶನ ವಿತರಣೆಗೆ ಚಾಲನೆ ನೀಡಿ’ ಎಂದು ತಿಳಿಸಿದರು.

‘ಒಳ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ಶೀಘ್ರ ನಿವಾರಿಸಬೇಕು. ರಂಗಮಂದಿರ ನಿರ್ಮಾಣ ಸಂಬಂಧ ಕಲಾವಿದರು, ಸಂಘ ಸಂಸ್ಥೆಗಳ ಪ್ರಮುಖ ಸಭೆ ಕರೆದು ಸಲಹೆ ಪಡೆಯಬೇಕು’ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಯೋಜನಾಧಿಕಾರಿ ರಂಗಸ್ವಾಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಪ್ರದೀಪ್, ಪ್ರಮುಖರಾದ ಐ.ಎನ್.ಸುರೇಶ್ ಬಾಬು, ಮಕ್ಬುಲ್ ಅಹ್ಮದ್, ಗಣಪತಿ ಮಂಡಗಳಲೆ, ಮಧುಮಾಲತಿ, ಮದನ್, ಬಾಲಚಂದ್ರ, ಟಿ.ಪಿ.ರಮೇಶ್, ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-42-1144994366

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.