ಶಿವಮೊಗ್ಗ: ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ‘ಕಲಬೆರಕೆ ತಡೆಗೆ – ನಮ್ಮ ನಡಿಗೆ’ ಹೆಸರಲ್ಲಿ ಆಹಾರ ಸುರಕ್ಷತಾ ಅಭಿಯಾನ ಹಮ್ಮಿಕೊಂಡಿದೆ.

ಅಭಿಯಾನದ ಭಾಗವಾಗಿ ದೊಡ್ಡ, ಸಣ್ಣ, ಮಧ್ಯಮ ಪ್ರಮಾಣದ ಹೋಟೆಲ್ನವರು, ಬೀದಿಬದಿ ವ್ಯಾಪಾರಿಗಳು, ಫಾಸ್ಟ್ ಫುಡ್ ತಯಾರಕರು, ಬೇಕರಿ, ಜ್ಯೂಸ್ ಸೆಂಟರ್, ಐಸ್ಕ್ರೀಮ್ ಹಾಗೂ ಕಾಂಡಿಮೆಂಟ್ಸ್ ಮಾಲೀಕರು ಎಫ್ಎಸ್ಎಸ್ಎಐನ ನೋಂದಣಿ, ಪರವಾನಗಿ ಪಡೆಯುವುದು ಕಡ್ಡಾಯ ಎಂಬ ಅರಿವು ಮೂಡಿಸಲಾಗುತ್ತಿದೆ.

ನಿಷೇಧಿತ ಕೃತಕ ಬಣ್ಣಗಳು, ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಹಾಗೂ ಕೃತಕ ರುಚಿಕಾರಕಗಳ (ಎಂಎಸ್ಜಿ/ಟೇಸ್ಟಿಂಗ್ ಪೌಂಡರ್) ಆಹಾರ ತಯಾರಿಕೆಯಲ್ಲಿ ಬಳಸಬಾರದು. ಕಳಪೆ, ಕಲಬೆರಕೆ, ಹಾನಿಕಾರಕ ಆಹಾರ ವಸ್ತುಗಳ ತಯಾರಿಕೆ, ದಾಸ್ತಾನು, ವಿತರಣೆ ಮತ್ತು ಮಾರಾಟ ಮಾಡುವಂತಿಲ್ಲ.

ಈ ನಿಯಮಗಳಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಚೇರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹಾಗೂ ಟೋಲ್ ಫ್ರೀ ನಂ; 080–22270035 ಅಥವಾ ಆರೋಗ್ಯ ನಿರೀಕ್ಷಕರು, ಮಹಾನಗರ ಪಾಲಿಕೆ, ಆಹಾರ ನಿರೀಕ್ಷಕರು–ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರನ್ನು ಸಂಪರ್ಕಿಸಲು ಕೋರಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-42-1502503547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.