ತುಮರಿ: ಕರೂರು ಹೋಬಳಿಯ ವಳಗೆರೆ ಗ್ರಾಮದ ಮುರಕ್ಕಿ ಯೋಜರಾಜ ಅವರ ಜಮೀನಿನಲ್ಲಿನ ಬೇಲಿ ತೆರವು ಮಾಡಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಅರಣ್ಯ ಇಲಾಖೆ (ವನ್ಯಜೀವಿ) ಸಿಬ್ಬಂದಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ತುಮರಿ ಸಮೀಪದ ಅಂಬಾರಗೋಡ್ಲು ಬೇಟೆ ನಿಗ್ರಹ ಶಿಬಿರದ ಮುಂಭಾಗ ಜಮಾಯಿಸಿದ ರೈತರು ಹಾಗೂ ಬಿಜೆಪಿ ಮುಖಂಡರು, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿ, ಅವರ ವರ್ತನೆಯನ್ನು ಖಂಡಿಸಿದರು.

‘70 ವರ್ಷಗಳಿಂದ ಕೆಪಿಸಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಜಮೀನಿನ ಬೇಲಿಯನ್ನು ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಹೆಸರಿನಲ್ಲಿ ತೆರವು ಮಾಡಿರುವ ಕ್ರಮ ಖಂಡನೀಯ. ಇಲ್ಲಿನ ರೈತ ಕುಟುಂಬದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ಅನಾಗರಿಕತನ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ದುರ್ನಡತೆ ಹೆಚ್ಚುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ರಾಜ್ಯದ ಅರಣ್ಯ ಭೂಮಿಗಳಲ್ಲಿ ಸಾವಿರಾರು ಜನ ಬದುಕು ಕಟ್ಟಿಕೊಂಡಿದ್ದಾರೆ. ಅವರನ್ನು ಒಕ್ಕಲೆಬ್ಬಿಸಲು ಸಾಧ್ಯವೇ? ಜಿಲ್ಲೆಯಲ್ಲಿ ಎಂಪಿಎಂ ಗುತ್ತಿಗೆ ಅವಧಿ ಮುಗಿದಿದ್ದು ಹಲವೆಡೆ ಅಕ್ರಮವಾಗಿ ಕಡಿತಲೆ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಒತ್ತಾಯಿಸಿದರು.

‘3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನು ತೆರವು ಮಾಡುವುದಿಲ್ಲ ಎಂದು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಜಿಲ್ಲೆಯಲ್ಲಿ ಡಿಎಸಿಎಫ್, ಎಸಿಎಫ್ ಇನ್ನಿತರ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ರೈತರ ಭೂಮಿ ತೆರವಿಗೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ’ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಹೇಳಿದರು.

‘ಜನಪ್ರತಿನಿಧಿಗಳು ರಾಜಕೀಯ ದುರುದ್ದೇಶದಿಂದ ರೈತರ ಮೇಲೆ ಅಧಿಕಾರ ಚಲಾಯಿಸಬಾರದು. ಗೆದ್ದ ಮೇಲೆ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲಿನ ಶಾಸಕರು ಉತ್ತಮ ಸಲಹೆ ಸೂಚನೆ ನೀಡುವವರನ್ನು ತಮ್ಮ ಜೊತೆಗೆ ಇಟ್ಟುಕೊಂಡರೆ ಸೂಕ್ತ. ಸಮಾಜದ ಮಧ್ಯೆ ಹುಳಿ ಹಿಂಡುವವರನ್ನು ದೂರವಿಡಬೇಕು’ ಎಂದು ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಸಲಹೆ ನೀಡಿದರು.

ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಗಣೇಶ ಪ್ರಸಾದ್, ಪ್ರಶಾಂತ ಕೆ.ಜಿ, ಸುಧೀಂದ್ರ ಹೊಸಕೊಪ್ಪ, ಸುವರ್ಣ ಟೀಕಪ್ಪ, ಅರುಣ್ ಕರೂರು, ಅ.ನಾ.ಚಂದ್ರಶೇಖರ್, ಚಂದ್ರು ಬೇಸೂರು, ಮಂಜಯ್ಯ ಸಂಸೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-42-337502071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.