ಸಾಗರ: ತಾಲ್ಲೂಕಿನ ಅಡ್ಡೇರಿಯ ಕೆಳಗಿನಮನೆ ಗ್ರಾಮದ ರೈತ ಮಹಿಳೆ ಸುಜಾತಾ ಮೇಲೆ ಅರಣ್ಯ ಸಿಬ್ಬಂದಿ ದೌರ್ಜನ್ಯ ನಡೆಸಿ ಅವರ ಕೃಷಿಭೂಮಿಯಲ್ಲಿರುವ ಗಿಡಗಳನ್ನು ಕಿತ್ತು ಹಾಕಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಇಲ್ಲಿನ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಯಾವುದೇ ಮರ ಕಡಿಯದೆ, ಊರಿನ ಮಧ್ಯೆ ಇರುವ ಜಾಗದಲ್ಲಿ ಅಡಿಕೆ, ಬಾಳೆ ಕೃಷಿ ಮಾಡುತ್ತಿರುವ ರೈತ ಮಹಿಳೆಯ ಕೃಷಿಭೂಮಿಗೆ ಈಚೆಗೆ ಅರಣ್ಯ ಸಿಬ್ಬಂದಿ ಏಕಾಏಕಿ ನುಗ್ಗಿ ಅಲ್ಲಿನ ಗಿಡಗಳನ್ನು ಕಡಿದಿದ್ದಾರೆ. ಇದೊಂದು ಅಮಾನವೀಯ ಕೃತ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಆರೋಪಿಸಿದರು.

‘10 ಗುಂಟೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತ ಮಹಿಳೆಯ ಮೇಲೆ ಅರಣ್ಯ ಇಲಾಖೆ ಕೆಂಗಣ್ಣು ಬೀರಿದೆ. ಆದರೆ, ಹತ್ತಾರು ಎಕರೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಸಾಗುವಳಿ ಮಾಡುವವರ, ಮರಗಳನ್ನು ಕಡಿದು ಸಾಗಿಸುವವರ ಬಗ್ಗೆ ಮೌನ ತಾಳಿದೆ’ ಎಂದು ದೂರಿದರು.

‘ಅರಣ್ಯ ಭೂಮಿ ಅತಿಕ್ರಮಣ ಪ್ರಕರಣ ಕಂಡುಬಂದರೆ ಸಂಬಂಧಪಟ್ಟ ಕಾನೂನಿನಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬಹುದು. ಸುಪ್ರೀಂಕೋರ್ಟ್, ಹೈಕೋರ್ಟ್ನ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಲ್ಲಿರುವ ಗಿಡಗಳನ್ನು ಕಡಿಯುವ ಅಧಿಕಾರ ಅರಣ್ಯ ಇಲಾಖೆಗೆ ಇಲ್ಲ. ಆದರೆ, ಇಲ್ಲಿನ ಅರಣ್ಯ ಸಿಬ್ಬಂದಿ ನ್ಯಾಯಾಲಯದ ನಿರ್ದೇಶನಗಳನ್ನು ಗಾಳಿಗೆ ತೂರಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಟೀಕಿಸಿದರು.

‘ಕೆಳಗಿನಮನೆ ಗ್ರಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿರುವ ದೌರ್ಜನ್ಯ ತಾಲ್ಲೂಕಿನಲ್ಲಿ ಆಡಳಿತ ಹೇಗೆ ಹದಗೆಟ್ಟಿದೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಭೂಮಿ ಸಾಗುವಳಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಇಲ್ಲಿನ ಅರಣ್ಯ ಇಲಾಖೆ ಅವರ ಮಾತಿಗೂ ಕಿಮ್ಮತ್ತು ನೀಡದಿರುವುದು ತುಘಲಕ್ ದರ್ಬಾರ್ನ ಸಂಕೇತವಾಗಿದೆ’ ಎಂದು ದೂರಿದರು.

ಪ್ರತಿಭಟನಕಾರರ ಅಹವಾಲು ಕೇಳಿದ ಡಿಎಫ್ಒ ಫಯಾಜುದ್ದೀನ್ ಅವರು ಸ್ಥಳಕ್ಕೆ ಎಸಿಎಫ್ ರವಿ ಹಾಗೂ ಇತರ ಅರಣ್ಯ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.

‘ಆ ಪ್ರಕಾರ ಪ್ರತಿಭಟನಕಾರರೊಂದಿಗೆ ಸ್ಥಳಕ್ಕೆ ತೆರಳಿ ಮರಳಿ ಕಚೇರಿಗೆ ಬಂದಾಗ ಡಿಎಫ್ಒ ಸ್ಥಳದಲ್ಲಿ ಇರಲಿಲ್ಲ. ಸ್ಥಳ ಪರಿಶೀಲನೆಯಿಂದ ವಾಸ್ತವಾಂಶ ಬೆಳಕಿಗೆ ಬಂದಿದ್ದು, ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ತಪ್ಪು ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ’ ಎಂದು ಪಟ್ಟು ಹಿಡಿದರು.

‘ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು. ಕ್ರಮ ಕೈಗೊಳ್ಳುವ ಅಧಿಕಾರ ನನ್ನ ವ್ಯಾಪ್ತಿಯಲ್ಲಿಲ್ಲ’ ಎಂದು ಎಸಿಎಫ್ ರವಿ ಅವರು ನೀಡಿದ ಉತ್ತರ ಪ್ರತಿಭಟನಕಾರರಿಗೆ ಸಮಾಧಾನ ತರಲಿಲ್ಲ.

ಈ ಹಂತದಲ್ಲಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟ ಭರವಸೆ ನೀಡದಿದ್ದರೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

‘ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಿ, ಅವರಿಂದ ವಿವರಣೆ ಪಡೆದು, ತಪ್ಪು ಮಾಡಿದ್ದು ಕಂಡುಬಂದಲ್ಲಿ ವಾರದೊಳಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಭರ್ಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಮುಖರಾದ ಸೋಮಶೇಖರ್ ವೀರಾಪುರ, ಶ್ರೀಧರ ಸಂಪಳ್ಳಿ, ಮಲ್ಲಿಕಾ ಮಂಜುನಾಥ್, ನಾಗರತ್ನ, ಮೂಕಾಂಬಿಕಾ, ಮಹೇಶ್ ಅಡ್ಡೇರಿ, ದ್ಯಾವಪ್ಪ ಅಡ್ಡೇರಿ, ಮಂಜು ಕೆಳಗಿನಮನೆ, ಗೌರಮ್ಮ, ರವಿಕುಮಾರ್, ಜಗನ್ನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-42-579980218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.