ಶಿವಮೊಗ್ಗ: ‘ನ್ಯಾಯ ಪಡೆಯುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹಿಸಿ ವಕೀಲರ ನೇತೃತ್ವದಲ್ಲಿ ಸಾರ್ವಜನಿಕರು ಹೋರಾಟಕ್ಕೆ ಇಳಿದಿರುವುದು ಬೇಸರದ ಸಂಗತಿ’ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ವಕೀಲರ ಭವನದ ಮುಂಭಾಗ ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ನಡೆಯುತ್ತಿರುವ ಧರಣಿಯಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದರು.

‘ಮಧ್ಯ ಕರ್ನಾಟಕಕ್ಕೆ ಅಗತ್ಯವಾದ ಹೈಕೋರ್ಟ್ ಪೀಠಕ್ಕೆ ಒತ್ತಾಯಿಸಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ‘ಸೋತವನು ಸತ್ತ– ಗೆದ್ದವನು ಸೋತ’ ಎಂಬ ಮಾತಿದೆ. ಅದೇ ರೀತಿ ನ್ಯಾಯಪೀಠಕ್ಕಾಗಿ ನಾವು ಹೋರಾಡಬೇಕಾಗಿದೆ. ನ್ಯಾಯ ಪಡೆಯುವುದು ಅನಾದಿ ಕಾಲದಿಂದಲೂ ಪ್ರತಿಯೊಬ್ಬರ ಹಕ್ಕಾಗಿದೆ’ ಎಂದರು.

‘ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಧ್ಯ ಕರ್ನಾಟಕದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಸಜ್ಜನರ ಸಾಂಸ್ಕೃತಿಕ ಜಿಲ್ಲೆಯಾಗಿದೆ. ಜನರ ಪರವಾಗಿ ಸರ್ಕಾರ ಈ ಬೇಡಿಕೆ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಮಾತನಾಡಿ, ‘ಸರ್ಕಾರಕ್ಕೆ ಮೊದಲಿನಿಂದಲೂ ಯೋಜನೆಗಳನ್ನು ರೂಪಿಸುವಾಗ ಮಧ್ಯಕರ್ನಾಟಕ ನೆನಪಿಗೆ ಬರುವುದಿಲ್ಲ. ಇದು ಮಲೆನಾಡಿಗರ ಭಾವನಾತ್ಮಕ ಬೇಡಿಕೆಯಲ್ಲ, ಅಂಕಿ ಅಂಶಗಳನ್ನೊಳಗೊಂಡ ವಸ್ತುನಿಷ್ಠ ಬೇಡಿಕೆಯಾಗಿದೆ’ ಎಂದರು.

‘ಸಂಖ್ಯಾಬಲದಿಂದ ಮತ್ತು ಇನ್ನಿತರ ಅಂಶಗಳಿಂದಲೂ ನ್ಯಾಯಯುತವಾಗಿ ಹೈಕೋರ್ಟ್ ಪೀಠ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು. ವಸ್ತುಸ್ಥಿತಿ ಅಧ್ಯಯನ ಮಾಡದೇ ಮಂಗಳೂರಿಗೆ ಹೈಕೋರ್ಟ್ ಪೀಠ ನೀಡಿದರೆ ಅದು ಸರಿಯಾದ ತೀರ್ಮಾನವಲ್ಲ. ಶಿವಮೊಗ್ಗವನ್ನು ನಿರಾಕರಿಸಲು ಯಾವುದೇ ಕಾರಣ ಇಲ್ಲ’ ಎಂದು ಹೇಳಿದರು.

ಜಡೆ ಮಠದ ಮಹಾಂತ ಸ್ವಾಮೀಜಿ ಹಾಗೂ ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-42-1237873026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.