ಶಿವಮೊಗ್ಗ: ಮಧ್ಯ ಕರ್ನಾಟಕದ ಭಾಗವಾದ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ವಕೀಲರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ದಿನೇ ದಿನೇ ಗಂಭೀರ ಸ್ವರೂಪ ಪಡೆಯುತ್ತಿದೆ.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್ಕುಮಾರ್, ‘ಹೈಕೋರ್ಟ್ನಲ್ಲಿ ಬಾಕಿ ಇರುವ ಶಿವಮೊಗ್ಗ ಜಿಲ್ಲೆಯ ಪ್ರಕರಣಗಳ ಸಂಖ್ಯೆ ಮಂಗಳೂರಿನಷ್ಟೇ ಇರುವುದರಿಂದ ಮಧ್ಯ ಕರ್ನಾಟಕದ ಕೇಂದ್ರ ಭಾಗವಾದ ಶಿವಮೊಗ್ಗದಲ್ಲಿ ಪೀಠ ಸ್ಥಾಪಿಸುವುದು ಹೆಚ್ಚು ಸೂಕ್ತ. ಶಿವಮೊಗ್ಗಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರಸ್ತೆ ಸಂಪರ್ಕ ಉತ್ತಮವಾಗಿದೆ. ಯಾವುದೇ ಜಿಲ್ಲೆಯಿಂದಾದರೂ ಎರಡು ಗಂಟೆಗಳೊಳಗೆ ತಲುಪಬಹುದು. ಆದ್ದರಿಂದ ಮಂಗಳೂರಿಗಿಂತ ಶಿವಮೊಗ್ಗವೇ ಸೂಕ್ತ ಆಯ್ಕೆ’ ಎಂದರು.

‘ಮಂಗಳೂರಿಗೆ ತೆರಳಲು ಸಮರ್ಪಕ ರೈಲು ಹಾಗೂ ವಿಮಾನ ಸಂಪರ್ಕ ಇಲ್ಲ. ಬಸ್ ಮಾರ್ಗವೂ ಘಾಟ್ ಪ್ರದೇಶದ ಮೂಲಕ ಸಾಗುತ್ತದೆ. ಹೀಗಾಗಿ ಪ್ರಯಾಣ ಕಷ್ಟಕರ. ಶಿವಮೊಗ್ಗದಿಂದ ಬೆಂಗಳೂರಿಗೆ ರೈಲು, ಸರ್ಕಾರಿ ಬಸ್ ಹಾಗೂ ವಿಮಾನ ಸೌಲಭ್ಯಗಳಿವೆ. ನ್ಯಾಯಾಲಯ ಸಂಬಂಧಿತ ಕಾರ್ಯಗಳಿಗೆ ಅದು ಹೆಚ್ಚು ಅನುಕೂಲಕರವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಶಿವಮೊಗ್ಗ ಜಿಲ್ಲೆಯ ಹೈಕೋರ್ಟ್ ಪ್ರಕರಣಗಳಿಗೆ ಹಾಜರಾಗುವ ಬಹುತೇಕ ವಕೀಲರು ಜಿಲ್ಲೆಯವರೇ ಆಗಿರುವುದರಿಂದ ಸಾರ್ವಜನಿಕರಿಗೆ ನೈತಿಕ ಹಾಗೂ ಕಾನೂನು ನೆರವು ಸುಲಭವಾಗಿ ದೊರೆಯುತ್ತಿದೆ. ಪ್ರಕರಣಗಳನ್ನು ಮಂಗಳೂರಿಗೆ ಸ್ಥಳಾಂತರಿಸಿದರೆ ಹೆಚ್ಚುವರಿ ವೆಚ್ಚ, ಸಮಯ ನಷ್ಟ ಹಾಗೂ ಅನಾನುಕೂಲ ಉಂಟಾಗಲಿದೆ’ ಎಂದು ಕಿಡಿಕಾರಿದರು.

‘ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭವಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದಕ್ಕೆ ಶಿವಮೊಗ್ಗ ಜಿಲ್ಲೆಯ ಸೇರ್ಪಡೆಗೆ ವಿರೋಧವಿದೆ. ಎಲ್ಲ ದೃಷ್ಟಿಯಿಂದಲೂ ಅದು ಸಾರ್ವಜನಿಕರಿಗೆ ಹೊರೆಯಾಗಲಿದೆ’ ಎಂದರು.

ವಕೀಲರ ಸಂಘದ ಪ್ರಮುಖರಾದ ಜಿ.ಆರ್.ರಾಘವೇಂದ್ರ ಸ್ವಾಮಿ, ಪದಾಧಿಕಾರಿಗಳಾದ ಎಸ್.ಎ.ಶ್ರೀನಿವಾಸ್, ಎಂ.ಬಿ.ಮಾಲತೇಶ್, ಸತೀಶ್ಕುಮಾರ್ ಶೆಟ್ಟಿ, ಅಶೋಕ್ ಗಾಂಧಿ ಬಸಪ್ಪ, ಅಶ್ವತ್ಥನಾರಾಯಣ ಶೆಟ್ಟಿ, ಜಿ.ವಿಜಯಕುಮಾರ್, ರೈತ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-42-1993008370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.