ಶಿವಮೊಗ್ಗ: ಮಲೆನಾಡು, ಮಧ್ಯ ಕರ್ನಾಟಕದ ಕೊಂಡಿ ಶಿವಮೊಗ್ಗದಲ್ಲಿ ಕಳೆದ ಕೆಲ ದಿನಗಳಿಂದ ಹೈಕೋರ್ಟ್ ಸಂಚಾರಿ ಪೀಠದ ಸದ್ದು ಜೋರಾಗುತ್ತಿದೆ. ಮಂಗಳೂರಿನ ಉದ್ದೇಶಿತ ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಜಿಲ್ಲೆಯನ್ನು ಸೇರಿಸುವುದು ಸರಿಯಲ್ಲ ಎಂಬ ಆಕ್ಷೇಪದೊಂದಿಗೆ ಆರಂಭವಾದ ವಿರೋಧದ ದನಿ ಮೆಲ್ಲನೆ ಚಳವಳಿಯ ಸ್ವರೂಪ ಪಡೆದಿದೆ. ಅದರೊಟ್ಟಿಗೆ ಶಿವಮೊಗ್ಗದಲ್ಲೇ ಪೀಠ ಸ್ಥಾಪಿಸಬೇಕೆಂಬ ದನಿ ಗಟ್ಟಿಗೊಳ್ಳುತ್ತಿದೆ.

ಈ ಪುಟ್ಟ ಪ್ರತಿರೋಧ ಆರಂಭಿಸಿದ್ದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘ. ನಂತರ ಆ ವಿರೋಧವನ್ನು ಜನಾಭಿಪ್ರಾಯವಾಗಿ ರೂಪಿಸಲು ಹುಟ್ಟಿಕೊಂಡಿದ್ದು, ಮಧ್ಯ ಕರ್ನಾಟಕದ ಹೈಕೋರ್ಟ್ ಸಂಚಾರಿ ಪೀಠದ ಹೋರಾಟ ಸಮಿತಿ. ಅದನ್ನು ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿರುವವರು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ. ಹೋರಾಟದ ಈ ಹಾದಿಯ ಬಗ್ಗೆ ‘ಪ್ರಜಾವಾಣಿ’ ಸಂದರ್ಶನಕ್ಕೆ ಅವರು ಮುಖಾಮುಖಿಯಾದರು.

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ವಿಚಾರದಲ್ಲಿ ಆಡಳಿತಾತ್ಮಕವಾಗಿ ಏನಾದರೂ ಬೆಳವಣಿಗೆ ಆಗಿದೆಯಾ?

ಹೌದು ಆಗಿದೆ. ಸ್ಪೀಕರ್ ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಅಬ್ದುಲ್ ನಜೀರ್ ಅವರ ಒತ್ತಡದ ಕಾರಣ ಆ ಪ್ರಕ್ರಿಯೆ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಅಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಹಾಗಿದ್ದರೆ ಮಂಗಳೂರು ಪೀಠದ ಭಾಗವಾಗಲು ಶಿವಮೊಗ್ಗದ ಜನರ ವಿರೋಧವೇಕೆ?

ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಸಂಚಾರಿ ಪೀಠಕ್ಕೆ ಸೇರಿಸುವುದು ಭೌಗೋಳಿಕವಾಗಿ ಸಮಂಜಸವಲ್ಲ. ಈಗ ಬೆಂಗಳೂರಿಗೆ ಶಿವಮೊಗ್ಗದಿಂದ ನಿತ್ಯ 82 ಬಸ್, 12 ರೈಲುಗಳ ಓಡಾಟದ ಜೊತೆಗೆ ವಿಮಾನದ ಸಂಪರ್ಕವೂ ಇದೆ. ಆದರೆ ಮಂಗಳೂರಿನಿಂದ ಸಂಜೆ 6.40ಕ್ಕೆ ಶಿವಮೊಗ್ಗಕ್ಕೆ ಕೊನೆಯ ಬಸ್ ಇದೆ.

ಹೈಕೋರ್ಟ್ ಪೀಠ ಸ್ಥಾಪನೆ ಸಣ್ಣ ವಿಷಯವಲ್ಲ. ಅದನ್ನು ಸುಮ್ಮನೆ ಎಲ್ಲೆಲ್ಲೋ ಮಾಡಲು ಆಗೊಲ್ಲ. ಅದಕ್ಕೆ ನಿರ್ದಿಷ್ಟ ಸಂಖ್ಯೆಯ ಪ್ರಕರಣ ಇರಬೇಕು. ವಾಸ್ತವವಾಗಿ ಅಷ್ಟು ಪ್ರಕರಣ ಅಲ್ಲಿ ಇಲ್ಲ. ಹೀಗಾಗಿ ಅವರು ಮೊದಲಿಗೆ ಉತ್ತರ ಕನ್ನಡದವರನ್ನು ಸೇರಿಸಲು ಕೇಳಿದ್ದರು. ಅಲ್ಲಿಯೂ ವಿರೋಧ ವ್ಯಕ್ತವಾಗಿದೆ. ಈಗ ಶಿವಮೊಗ್ಗವನ್ನು ಸೇರಿಸಿದರೆ ಮಾತ್ರ ಅಲ್ಲಿ ಪೀಠಕ್ಕೆ ತಾಂತ್ರಿಕವಾಗಿ ಅರ್ಹತೆ ಸಿಗುತ್ತದೆ. ಆ ಕಾರಣಕ್ಕೆ ಒತ್ತಾಯಪೂರ್ವಕವಾಗಿ ನಮ್ಮನ್ನು ಸೇರಿಸಲು ಹೊರಟಿದ್ದಾರೆ. ಹೀಗಾಗಿ ವಿರೋಧ ಅನಿವಾರ್ಯ.

ಆರಂಭದಲ್ಲಿ ಹೈಕೋರ್ಟ್ ಸಂಚಾರಿ ಪೀಠಕ್ಕಾಗಿ ಸಂಘದಿಂದ ಹೋರಾಟ ಆರಂಭಿಸಿದಾಗ ವಕೀಲರು, ಕಕ್ಷಿದಾರರು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಶಿವಮೊಗ್ಗವನ್ನು ಮಂಗಳೂರು ಪೀಠಕ್ಕೆ ಸೇರಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದರ ಗಂಭೀರತೆ ಎಲ್ಲರಿಗೂ ಅರ್ಥವಾಗಿ ಹೋರಾಟವನ್ನು ಬೆಂಬಲಿಸತೊಡಗಿದರು. ಶಿವಮೊಗ್ಗ ಜಿಲ್ಲೆಯ ಜನರ ಯಾವುದೇ ಅಭಿಪ್ರಾಯ ಸಂಗ್ರಹ ಮಾಡದೇ ಇಲ್ಲಿನ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳ ಒಪ್ಪಿಗೆ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಬೀದಿಗೆ ಇಳಿಯಬೇಕಾಯಿತು.

ಹೋರಾಟದ ಸ್ಪಷ್ಟ ಉದ್ದೇಶ ಏನು. ಮಂಗಳೂರಿಗೆ ಸೇರಿಸುವುದಕ್ಕೆ ವಿರೋಧವೇ?, ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠಕ್ಕೆ ಬೇಡಿಕೆಯೇ?

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆರಂಭವಾದರೆ ನಾವು ಮಂಗಳೂರಿಗೆ ಸೇರ್ಪಡೆ ಗೊಳ್ಳುವ ಪ್ರಶ್ನೆಯೇ ಇಲ್ಲ. ಹೀಗಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಒಳಗೊಂಡ ಮಧ್ಯ ಕರ್ನಾಟಕಕ್ಕೆ ಪೀಠ ಬೇಕಿದೆ. ಅದಕ್ಕೆ ಕೇಂದ್ರ ಸ್ಥಾನ ಶಿವಮೊಗ್ಗವೇ ಆಗಿರಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ.

ಹೋರಾಟ ಪಕ್ಷಾತೀತವಾಗಿ ಮುನ್ನಡೆಯಲಿದೆಯಾ?

ಇದು ಬರೀ ವಕೀಲರ ಹೋರಾಟವಲ್ಲ. ಬದಲಿಗೆ ಮಧ್ಯ ಕರ್ನಾಟಕದ ಜನರ ಹೋರಾಟ. ಹೈಕೋರ್ಟ್ ಪೀಠ ಬೆಂಗಳೂರು, ಮಂಗಳೂರು ಎಲ್ಲಿಯಾದರೇನು? ನಮಗೆ (ವಕೀಲರಿಗೆ) ತೊಂದರೆ ಆಗೊಲ್ಲ. ಕಕ್ಷಿದಾರರಿಂದ ಶುಲ್ಕ ಪಡೆಯುತ್ತೇವೆ. ಅವರ ಪರ ಕೋರ್ಟಿಗೆ ಹೋಗುತ್ತೇವೆ. ಮಂಗಳೂರಿನಲ್ಲಿ ಆದರೆ ಕಕ್ಷಿದಾರರಿಗೆ ಬಹಳ ತೊಂದರೆ. ಆರ್ಥಿಕವಾಗಿ ಹೊರೆ. ಹೀಗಾಗಿ ಅವರಿಗೋಸ್ಕರ ಹೋರಾಟ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಮುನ್ನಡೆಸುತ್ತಿದ್ದೇವೆ. ಹೋರಾಟದ ವೇದಿಕೆಗೆ ಎಲ್ಲ ಪಕ್ಷದವರೂ ಬರುತ್ತಿದ್ದಾರೆ.

ಶಿವಮೊಗ್ಗದ ಈ ಹೋರಾಟಕ್ಕೆ ಧಾರವಾಡದಲ್ಲಿ ಹೈಕೋರ್ಟ್ ಪೀಠಕ್ಕಾಗಿ ನಡೆದ ಹೋರಾಟ ಸ್ಫೂರ್ತಿಯೇ? ತಾವು ಮತ್ತೊಬ್ಬ ಬಿ.ಡಿ.ಹಿರೇಮಠ ಆಗಲಿದ್ದೀರಾ?

ನನಗೆ ಅದು ಗೊತ್ತಿಲ್ಲ. ನಮ್ಮ ಹೋರಾಟ ನಮ್ಮದು. ಬಿ.ಡಿ.ಹಿರೇಮಠ ಅವರು ಯಾರು ಅಂತಾನೆ ನನಗೆ ಗೊತ್ತಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠದ ಅವಶ್ಯಕತೆ ಇದೆ, ಕೊಡಿ ಎಂಬುದಷ್ಟೇ ನಮ್ಮ ಧ್ಯೇಯ. ಇದರಲ್ಲಿ ನನ್ನ ವೈಯಕ್ತಿಕ ಲಾಭ ಏನೂ ಇಲ್ಲ. ನಮ್ಮೊಂದಿಗೆ ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿ ಕೆ.ಬಸಪ್ಪಗೌಡ, ಅಧ್ಯಕ್ಷರಾಗಿ ಅಶೋಕ್ ಜಿ.ಭಟ್, ಗೋಪಿಕೃಷ್ಣ, ವಾಸುದೇವಮೂರ್ತಿಯಂತಹ ಹಿರಿಯರು ಇದ್ದು, ಎಲ್ಲ ತಾಲ್ಲೂಕು ಘಟಕಗಳು ಒತ್ತಾಸೆಯಾಗಿ ನಿಂತಿವೆ.

ಹೋರಾಟಕ್ಕೆ ಸರ್ಕಾರದ ಸ್ಪಂದನೆಯ ಭರವಸೆ ಇದೆಯೇ?

ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಶಿವಮೊಗ್ಗ ಸೇರಿಸೊಲ್ಲ ಎಂಬ ಭರವಸೆ ನಮಗೆ ಸಿಎಂ ಕಚೇರಿಯಿಂದ ಸಿಕ್ಕಿದೆ. ಶಿವಮೊಗ್ಗಕ್ಕೆ ಪೀಠದ ಬೇಡಿಕೆಯೊಂದಿಗೆ ಜೂನ್ 1ರವರೆಗೆ ಹೋರಾಟ ಮುನ್ನಡೆಯಲಿದೆ. ಅಂದು ಸಿಎಂ ಶಿವಮೊಗ್ಗಕ್ಕೆ ಬರಲಿದ್ದಾರೆ. ಅವರು ಕೊಡುವ ಭರವಸೆ ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-42-427066833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.