ಶಿಕಾರಿಪುರ: ತಾಲ್ಲೂಕಿನ ಬೇಗೂರಿನಲ್ಲಿ ಕಗ್ಗಂಟಾಗಿದ್ದ ಇನಾಂ ಭೂಮಿ ಮಾಲೀಕತ್ವ ವಿಚಾರ ಈಗ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ. 2009ರ ಹೈಕೋರ್ಟ್ ಆದೇಶದಂತೆ ಭೂಮಿ ಮಾಲೀಕತ್ವ ಮರು ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿ ಸಿದ್ದು, ರೈತಾಪಿ ವರ್ಗದಲ್ಲಿ ಎಂಟು ದಶಕಗಳ ಸಮಸ್ಯೆಗೆ ಮುಕ್ತಿ ದೊರೆಯುವ ಆಶಾಭಾವ ಮೂಡಿದೆ.

ಬೇಗೂರು ಗ್ರಾಮದ ಸುತ್ತಲಿನ ಅಂದಾಜು 950 ಎಕರೆ ಇನಾಂ ಭೂಮಿಯ ಮಾಲೀಕತ್ವ ಉಳುಮೆ ಮಾಡುತ್ತಿರುವ ರೈತರಿಗೆ ಸೇರಬೇಕೋ ಅಥವಾ ಇನಾಂ ಭೂಮಿ ಉಡುಗೊರೆಯಾಗಿ ಪಡೆದಿರುವ ಕೂಡಲಿಯ ಶೃಂಗೇರಿ ಮಠಕ್ಕೆ ಸೇರಬೇಕೋ ಎಂಬ ಜಿಜ್ಞಾಸೆ ಕಾಡಿತ್ತು. ಪ್ರಕರಣದ ವಿಚಾರಣೆ ನಡೆಸುವಂತೆ 2009ರಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗೆ ಆದೇಶಿಸಿದ್ದ ಹೈಕೋರ್ಟ್, ಹಲವು ನಿರ್ದೇಶನಗಳ ಜೊತೆ ಸ್ಪಷ್ಟನೆಯನ್ನೂ ನೀಡಿತ್ತು.

ಅದಾದ ನಂತರ ಯಾವ ಜಿಲ್ಲಾಧಿಕಾರಿಯೂ ಪ್ರಕರಣದ ವಿಚಾರಣೆ ನಡೆಸಿರಲಿಲ್ಲ. ಹೊಸ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಪ್ರಕರಣದ ವಿಚಾರಣೆ ನಡೆಸಿದ್ದಲ್ಲದೆ, 4 ತಿಂಗಳೊಳಗೆ ಸ್ಪಷ್ಟ ತೀರ್ಮಾನ ಕೈಗೊಳ್ಳುವಂತೆ ಸಾಗರ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದಾರೆ. ಇದು ರೈತ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

1954ರಲ್ಲಿ ಇನಾಂ ರದ್ಧತಿ ಕಾಯ್ದೆ ಜಾರಿಗೊಂಡಿತ್ತು. ಆದರೂ ತಾಲ್ಲೂಕಿನ ಬೇಗೂರು ಗ್ರಾಮದ ವಿವಿಧ ಸರ್ವೆ ನಂಬರ್ ನಲ್ಲಿರುವ ಅಂದಾಜು 950 ಎಕರೆ ಜಮೀನು ಮಾಲೀಕತ್ವ ರದ್ದಾಗಿಲ್ಲ. ‘ಕೂಡಲಿ ಶೃಂಗೇರಿ ಮಠ’ದ ಹೆಸರಿನಲ್ಲೇ ಈಗಲೂ ಪಹಣಿ ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಭೂಮಿ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರು ಇನಾಂ ರದ್ಧತಿ ಕಾಯ್ದೆ, ಉಳುವವರೆ ಹೊಲದೊಡೆಯ ಸೇರಿ ವಿವಿಧ ಕಾಯ್ದೆ ಅಡಿಯಲ್ಲಿ ತಮ್ಮ ಹೆಸರಿಗೆ ಭೂಮಿ ಮಾಲೀಕತ್ವ ಪಡೆಯಬೇಕು ಎಂದು ಹೋರಾಟ ನಡೆಸಿದ್ದರು. ಅದಕ್ಕೆ ಈವರೆಗೂ ಸಣ್ಣ ಯಶಸ್ಸು ಸಿಕ್ಕಿರಲಿಲ್ಲ.

1986ರಲ್ಲಿ ತಾಲ್ಲೂಕಿನ ಭೂನ್ಯಾಯ ಮಂಡಳಿಯಲ್ಲಿ ಮೊದಲು ಪ್ರಕರಣದ ವಿಚಾರಣೆ ನಡೆದಿತ್ತು. ಆಗ ಮಂಡಳಿಯು ಇನಾಂ ಭೂಮಿ ಹಕ್ಕು ಶೃಂಗೇರಿ ಮಠಕ್ಕೆ ಸೇರಿದ್ದಲ್ಲ ಎಂದು ಆದೇಶಿಸಿತ್ತು. ಆದೇಶದ ವಿರುದ್ಧ ಕೂಡ್ಲಿ ಶೃಂಗೇರಿ ಮಠದ ಆಡಳಿತಾಧಿಕಾರಿಗಳು ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿ ಹೈಕೋರ್ಟ್ನಲ್ಲಿ 2001ರಲ್ಲಿ ದಾವೆ (ಡಬ್ಲ್ಯು.ಪಿ.30886/2001) ಹೂಡಿದ್ದರು.

ಅದು 2009ರಲ್ಲಿ ಪುನರ್ ಪರಿಶೀಲನೆಗೆ ಒಳಪಟ್ಟು ಸುದೀರ್ಘ ವಿಚಾರಣೆ ನಂತರ ನೀಡಿದ ಆದೇಶದಲ್ಲಿ 1954ರಲ್ಲಿ ಇನಾಂ ಕಾಯ್ದೆ ರದ್ದಾಗಿತ್ತು. ಆದರೆ 1958ರಲ್ಲಿ ಮಠಕ್ಕೆ ಭೂಮಿ ಉಡುಗೊರೆಯಾಗಿ ಬಂದಿರುವುದಾಗಿ ದಾಖಲೆ ಸಲ್ಲಿಸಲಾಗಿದೆ. ಮಠದ ಈ ದಾಖಲೆಗೆ ಕಾನೂನುಬದ್ಧ ಮಾನ್ಯತೆ ಇಲ್ಲವಾಗಿದೆ. ಈ ಕಾರಣಕ್ಕೆ ಭೂಮಿಯ ಮೇಲೆ ಅದು ಹಕ್ಕು ಹೊಂದಿರುವುದಿಲ್ಲ. ಇನಾಂ ಭೂಮಿ ಮಠಕ್ಕೆ ಉಡುಗೊರೆಯಾಗಿ ನೀಡುವುದಕ್ಕಿಂತ ಮೊದಲು ಹಾಗೂ ನಂತರ ರೈತರು ಉಳುಮೆ ಮಾಡುತ್ತಿರುವುದು ದಾಖಲೆಯಲ್ಲಿ ಸ್ಪಷ್ಟವಾಗಿದೆ. ಪ್ರಕರಣ ವನ್ನು ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಹೈಕೋರ್ಟ್ 2009ರ ಏಪ್ರಿಲ್ 13ರಂದು ಆದೇಶಿಸಿತ್ತು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರಕರಣದ ವಿಚಾರಣೆ ಆರಂಭಿಸಿದ ನಂತರ 74 ರೈತರು ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 9ರಂದು ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ನೀಡಿದ್ದು 1986ರ ಭೂನ್ಯಾಯ ಮಂಡಳಿ ವಿಚಾರಣೆ ಸಂದರ್ಭದಲ್ಲಾಗಲಿ, ಶೃಂಗೇರಿ ಮಠ ಹೈಕೋರ್ಟ್ಗೆ ಸಲ್ಲಿಸಿರುವ ಮೇಲ್ಮನವಿ ಪ್ರಕರಣದಲ್ಲಾಗಲಿ ರೈತರು ಪ್ರತಿವಾದಿಗಳಾಗಿರಲಿಲ್ಲ. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲೂ ಸೂಕ್ತ ದಾಖಲೆ ಸಲ್ಲಿಸಿಲ್ಲ. ಬೇಗೂರು ಇನಾಂ ಭೂಮಿ ಕುರಿತು ದಾಖಲಾಗಿರುವ ಎಲ್ಲ ವಹಿವಾಟು ರದ್ದುಗೊಳಿಸಿ ಹಕ್ಕನ್ನು ಸರ್ಕಾರಕ್ಕೆ ವರ್ಗಾಯಿಸಬೇಕು. ನ್ಯಾಯಾಲಯ ನೀಡಿರುವ ನಿರ್ದೇಶನ, ಅನ್ವಯಿಸುವ ಕಾಯ್ದೆ, ನಿಯಮ ಪ್ರಕಾರ ಭೂನ್ಯಾಯ ಮಂಡಳಿಯಲ್ಲಿ ಪ್ರಕರಣ ವಿಚಾರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-42-1558640457

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.