ಶಿವಮೊಗ್ಗ: ನಗರದ ಎನ್ಇಎಸ್ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ಗೆ ಭಾರಿ ಮಳೆ ಅಡ್ಡಿಯಾಯಿತು.

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯವನ್ನು ದೊಡ್ಡ ಪರದೆಯಲ್ಲಿ ನೋಡಲು ಬಂದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ವರುಣನ ಆರ್ಭಟ ನಿರಾಸೆ ಮೂಡಿಸಿತು.

ಕೆಎಸ್ಸಿಎ ಶಿವಮೊಗ್ಗ ವಲಯದ ಆಶ್ರಯದಲ್ಲಿ ಬೃಹತ್ ಎಲ್ಇಡಿ ಪರದೆ ಮೂಲಕ ಪಂದ್ಯದ ನೇರ ಪ್ರಸಾರ ವೀಕ್ಷಣೆಗೆ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ನಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಗುಡುಗು- ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ಇಡೀ ಮೈದಾನ ಜಲಾವೃತವಾಯಿತು.

ಮನೆಯಲ್ಲೇ ಟಿವಿ ಹಾಗೂ ಮೊಬೈಲ್ನಲ್ಲಿ ಪಂದ್ಯ ವೀಕ್ಷಿಸುವುದಕ್ಕಿಂತ ಫ್ಯಾನ್ ಪಾರ್ಕ್ನ ಸಂಭ್ರಮ ಅನುಭವಿಸಲು ಆಗಮಿಸಿದ್ದ ಅಭಿಮಾನಿಗಳ ಆಸೆಗೆ ಮಳೆ ತಣ್ಣೀರು ಎರಚಿದಂತಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಅನೇಕರು ಛತ್ರಿ ಹಿಡಿದುಕೊಂಡೇ ಹಾಗೂ ನಿಂತುಕೊಂಡೇ ದೊಡ್ಡ ಪರದೆ ಮೇಲೆ ಪಂದ್ಯ ವೀಕ್ಷಿಸಿದರು.

ಮಳೆಯ ನಡುವೆಯೂ ಕ್ರಿಕೆಟ್ ಮೇಲಿನ ಅಭಿಮಾನ ಕಡಿಮೆಯಾಗದೇ, ಹಲವರು ಮೈದಾನದಲ್ಲೇ ಉಳಿದು ಪಂದ್ಯ ವೀಕ್ಷಿಸಿದ ದೃಶ್ಯ ಗಮನ ಸೆಳೆಯಿತು

ಕೋಣಂದೂರು: ಸಂಜೆ ನಾಲ್ಕು ಗಂಟೆಯಿಂದ ಕೋಣಂದೂರು ಸುತ್ತಮುತ್ತ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು.

ಸುಮಾರು ಒಂದು ತಾಸು ಸುರಿದ ಮಳೆಯಿಂದ ರಸ್ತೆ ಬದಿ ಅನೇಕ ಮರಗಳು ಧರೆಗೆ ಹೊರಳಿದ್ದು ವಿದ್ಯುಚ್ಛಕ್ತಿಯಲ್ಲಿ ಅಡಚಣೆ ಉಂಟಾಗಿದೆ.ಮತ್ತೆ ಸಂಜೆ ವೇಳೆಗೂ ಸಹ ಮಳೆ ಆಗುತ್ತಿದೆ.ರೈತಾಪಿ ವರ್ಗದವರ ಮುಖದಲ್ಲಿ ಮಂದಹಾಸ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.