ಶಿವಮೊಗ್ಗ: ಕನ್ನಡ ರಂಗಭೂಮಿಗೆ ಕೊಡುಗೆ ನೀಡಿದ ಕಲಾವಿದರ ವಿವರಗಳನ್ನು ಒಳಗೊಂಡ ‘ಬೃಹತ್ ರಂಗ ಸಂಪುಟ’ ಹೊರತರಲು ಕರ್ನಾಟಕ ನಾಟಕ ಅಕಾಡೆಮಿ ನಿರ್ಧರಿಸಿದೆ. ಇದಕ್ಕಾಗಿ ಅರ್ಹ ರಂಗಕರ್ಮಿಗಳಿಂದ ಮಾಹಿತಿ ಮತ್ತು ಅರ್ಜಿಗಳನ್ನು ಆಹ್ವಾನಿಸಿದೆ.

ಅಕಾಡೆಮಿಯು ಈಗಾಗಲೇ 3 ಸಂಪುಟಗಳಲ್ಲಿ 800ಕ್ಕೂ ಹೆಚ್ಚು ಕಲಾವಿದರ ಮಾಹಿತಿ ದಾಖಲಿಸಿದೆ. ಆದರೆ, ಇನ್ನೂ ಅನೇಕ ಹಿರಿಯ ಹಾಗೂ ಅರ್ಹ ಕಲಾವಿದರ ಸಾಧನೆಗಳು ಬೆಳಕಿಗೆ ಬರಬೇಕಿದೆ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ನಟರು, ನಿರ್ದೇಶಕರು, ನಾಟಕಕಾರರು, ಸಂಗೀತ ತಜ್ಞರು, ರಂಗ ಕುಶಲಕರ್ಮಿಗಳು ಹಾಗೂ ವೇಷಭೂಷಣ ಸೇರಿದಂತೆ ನೇಪಥ್ಯದಲ್ಲಿ ಕೆಲಸ ಮಾಡುವ ಎಲ್ಲಾ ಕಲಾವಿದರ ವಿವರಗಳನ್ನು ಸಂಗ್ರಹಿಸಲು ಅಕಾಡೆಮಿ ಮುಂದಾಗಿದೆ.

ಮೊದಲ ಹಂತದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಕನಿಷ್ಠ 30 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿರಬೇಕು. 40 ವರ್ಷಕ್ಕೂ ಮೇಲ್ಪಟ್ಟ ರಂಗಭೂಮಿ ಕಲಾವಿದರ ವಿವರಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಕಲಾವಿದರು ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ, ನಾಟಕದಲ್ಲಿ ಅಭಿನಯಿಸುತ್ತಿರುವ/ ಕೆಲಸ ಮಾಡುತ್ತಿರುವ ಶೈಲಿಯ ಛಾಯಾಚಿತ್ರ ಹಾಗೂ ಗರಿಷ್ಠ 300 ಪದಗಳಿಗೆ ಮೀರದಂತೆ (2 ಪುಟ) ತಮ್ಮ ಸ್ವ-ವಿವರದ ಮಾಹಿತಿ ಸಲ್ಲಿಸಲು ಜೂನ್ 10 ಕೊನೆಯ ದಿನವಾಗಿದೆ.

ಆಸಕ್ತರು ತಮ್ಮ ಸಂಪೂರ್ಣ ವಿವರಗಳನ್ನು ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ನೆಲ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ. ರಸ್ತೆ, ಬೆಂಗಳೂರು - 560 002. ದೂರವಾಣಿ ಸಂಖ್ಯೆ: 080 - 22244176 ಈ ವಿಳಾಸಕ್ಕೆ ಅಥವಾ ಇಮೇಲ್ academy.nataka@gmail.com ಮೂಲಕ ಕಳುಹಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್. ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-1674837143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.