ಶಿಕಾರಿಪುರ: ರಾಣೇಬೆನ್ನೂರು–ಶಿಕಾರಿಪುರ–ಶಿವಮೊಗ್ಗ ಮಾರ್ಗದ ಕೆಎಸ್ಆರ್ಟಿಸಿ ಬಸ್, ಗ್ರಾಮೀಣ ಪ್ರದೇಶದಲ್ಲೂ ಸಂಚಾರ ಆರಂಭಿಸಿದ್ದಕ್ಕೆ ನಿಂಬೆಗೊಂದಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಹೊಸ ಬಸ್ ಸಂಚಾರದಿಂದಾಗಿ ನೆಲವಾಗಿಲು, ಗೊದ್ದನಕೊಪ್ಪ, ಮುಗಳಗೆರೆ, ನಿಂಬೆಗೊಂದಿ, ಮಟ್ಟಿಕೋಟೆ, ಸುರಗಿಹಳ್ಳಿ ಸೇರಿ 12ಕ್ಕೂ ಹೆಚ್ಚು ಗ್ರಾಮದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಮಾರುಕಟ್ಟೆ, ಆಸ್ಪತ್ರೆಗೆ ತೆರಳಲು ಜನರಿಗೆ ನೆರವಾಗಲಿದೆ. ಬಸ್ ಬಿಡುವುದಕ್ಕೆ ಸಹಕರಿಸಿದ ಶಾಸಕ ಬಿ.ವೈ.ವಿಜಯೇಂದ್ರ, ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗದ ನವೀನ್ಕುಮಾರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಗ್ರಾಮಸ್ಥ ಮಲ್ಲೇಶಪ್ಪ ಹೇಳಿದರು.

ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸಿದ ಕೆಎಸ್ಆರ್ಟಿಸಿ ಬಸ್ಗೆ ವಿಶೇಷ ಪೂಜೆ ಸಲ್ಲಿಸಿ, ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿ, ಹಾಜರಿದ್ದ ಗ್ರಾಮಸ್ಥರಿಗೂ ಸಿಹಿ ವಿತರಿಸಿ ಸಂಭ್ರಮಿಸಿದರು.

ಮುಖಂಡರಾದ ಸಿದ್ಧಲಿಂಗಪ್ಪ, ಸುರೇಶ್, ತಾರಕೇಶ್ವರಪ್ಪ, ಮಲ್ಲಿಕಾರ್ಜುನ, ಹುಚ್ಚಪ್ಪ, ಕೊಟ್ರೇಶಪ್ಪ, ಪೂಜಾರ್ ಪರಮೇಶ್ವರಪ್ಪ, ರುದ್ರಯ್ಯ, ವಿರುಪಾಕ್ಷಪ್ಪ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-42-391690619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.