ಶಿವಮೊಗ್ಗ: ಇಲ್ಲಿನ ದುರ್ಗಿಗುಡಿಯ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ₹5 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಹಿಂತಿರುಗಿಸಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ತರೀಕೆರೆಯ ನಿವಾಸಿ ಗಾಯತ್ರಿ ಏ.16 ರಂದು ಗಾಯತ್ರಿ ಇತಿಹಾಸ್ ಕಲೆಕ್ಷನ್ನಲ್ಲಿ ಬಟ್ಟೆ ಖರೀದಿಸಿದ್ದರು. ಈ ವೇಳೆ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗನ್ನು ಮರೆತು ಅಲ್ಲಿಯೇ ಬಿಟ್ಟು ಹೋಗಿದ್ದರು.

ಸಂಜೆ ಅಂಗಡಿ ಸ್ವಚ್ಛಗೊಳಿಸುವಾಗ ಬ್ಯಾಗ್ ಗಮನಿಸಿದ ಕೆಲಸಗಾರರಾದ ಸ್ವಾತಿ ಹಾಗೂ ಸಂಗೀತ ಅದನ್ನು ಮಾಲೀಕರಿಗೆ ಒಪ್ಪಿಸಿದ್ದರು.ಇತ್ತ ಗಾಯತ್ರಿ ಅವರು ಗಾಂಧಿಬಜಾರ್ ಸೇರಿದಂತೆ ಅಂದು ತಾವು ಓಡಾಡಿದ್ದ ಸ್ಥಳಗಳಲ್ಲಿ ಹುಡುಕಿ ಕೊನೆಗೆ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಬಂದು ವಿಚಾರಿಸಿದ್ದಾರೆ.

‘ವ್ಯಾನಿಟಿ ಬ್ಯಾಗ್ನಲ್ಲಿ ಏನಿದೆ. ಗಾಯತ್ರಿ ಅವರೇ ಅದರ ಮಾಲೀಕರು ಎಂಬುದನ್ನು ಖಚಿತಪಡಿಸಿಕೊಳ್ಳಲು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಪರಿಶೀಲಿಸಿ, ಖಚಿತಪಡಿಸಿಕೊಂಡು ಬ್ಯಾಗನ್ನು ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು’ ಎಂದು ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕ ಮಾರ್ತಾಂಡ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಾಮಾಣಿಕತೆ ಮೆರೆದ ಮಾರ್ತಾಂಡ ಹಾಗೂ ಅಂಗಡಿ ಕೆಲಸಗಾರರಾದ ಸ್ವಾತಿ, ಸಂಗೀತ ಅವರನ್ನು ಜಯನಗರ ಠಾಣೆ ಪೊಲೀಸರು ಸನ್ಮಾನಿಸಿ ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-42-1154040880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.