ಕಾರ್ಗಲ್: ಶರಾವತಿ ಕಣಿವೆಯ ಮಾರಿಕಾಂಬಾ ಜಾತ್ರಾ ವೈಭವ ಕಳೆದ ಮೂರು ದಿನಗಳಿಂದ ವೈಭವಯುತವಗಿ ನಡೆದಿದ್ದು, ಗುರುವಾರ ಊರ ಹೊರಗಿರುವ ಶರಾವತಿ ನದಿಯಲ್ಲಿ ಶಕ್ತಿಕರಗವನ್ನು ವಿಸರ್ಜಿಸುವ ಜಾತ್ರೋತ್ಸವಕ್ಕೆ ತೆರೆ ಬಿದ್ದಿತು. ಈ ವೇಳೆ ವರುಣ ಅಬ್ಬರ ಜೋರಾಗಿದ್ದು ಜಾತ್ರೆ ಮುಗಿಯುತ್ತಿದ್ದಂತೆ ಮಳೆಗಾಲ ಆರಂಭವಾಗುವುದು ವಾಡಿಕೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.

ಜಾತ್ರಾ ಮಹೋತ್ಸವ ಸೋಮವಾರ ಆರಂಭವಾಗಿತ್ತು. ಬುಧವಾರ ಕರಗಳಲ್ಲಿ ಬೇವಿನ ಎಲೆಯ ಕಟ್ಟು ಹಿಡಿದು, ಅರಿಸಿನ ಲೇಪಿತ ಹಳದಿ ಬಣ್ಣದ ಉಡುಗೆಗಳನ್ನು ತೊಟ್ಟು, ತಲೆಯ ಮೇಲೆ ಶಕ್ತಿ ಕರಗ ಹೊತ್ತು ಸಾಗುತ್ತಿದ್ದ ನೂರಾರು ಭಕ್ತರು ಮಾರಿಕಾಂಬಾ ಜಾತ್ರಾ ವೈಭವಕ್ಕೆ ಮೆರುಗು ನೀಡಿದರು.

ಹರಕೆ ಹೊತ್ತಿದ್ದ ಭಕ್ತರು ಒಂದೆಡೆ ಶರಾವತಿ ನದಿ ತಟದಿಂದ ಕರಗ ಹೊತ್ತು ತರುವಲ್ಲಿ ಶ್ರದ್ಧೆ ವಹಿಸಿದ್ದರೆ, ಮತ್ತೊಂದು ಗುಂಪು ಕಾರ್ಗಲ್ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ 21 ಅಡಿ ಉದ್ದದ ತ್ರಿಶೂಲವನ್ನು ಬಾಯಿಗೆ ಚುಚ್ಚಿಕೊಂಡು ತಲೆಯ ಮೇಲೆ ಅಗ್ನಿಯ ಮಡಿಕೆಗಳನ್ನು ಹೊತ್ತು ದ್ರಾವಿಡ ಮೇಳಗಳ ವಾದ್ಯಕ್ಕೆ ಹೆಜ್ಜೆ ಹಾಕುತ್ತ ಸಾಲು ಸಾಲಾಗಿ ಮೆರವಣಿಗೆ ಸಾಗುವ ದೃಶ್ಯ ನೋಡುಗರಲ್ಲಿ ರೋಮಾಂಚನ ಉಂಟು ಮಾಡಿತು.

ಜಾತ್ರೋತ್ಸವದ ಪರ್ವ ಘಟ್ಟದಲ್ಲಿ ಹರಕೆ ಹೊತ್ತ ಭಕ್ತರು ಮಡಿಯಲ್ಲಿ ಮಿಂದು 30 ಅಡಿ ಉದ್ದದ ಅಗ್ನಿ ಕುಂಡದಲ್ಲಿ ಬರಿಗಾಲಿನಲ್ಲಿ ನಿಧಾನ ನಡಿಗೆಯನ್ನು ಮಾಡಿದಾಗ ಸಾವಿರಾರು ಭಕ್ತರು ‘ಓಂ ಶಕ್ತಿ’, ‘ಜೈ ಶಕ್ತಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು.

ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕೂರಿಸಿ ಗ್ರಾಮದ ಮೂಲೆ ಮೂಲೆಗಳಲ್ಲಿ ಸಾವಿರಾರು ಜನರ ಸಾಮೂಹಿಕ ನೃತ್ಯದೊಂದಿಗೆ ಡಿ.ಜೆ. ಮೇಳ ಮತ್ತು ದ್ರಾವಿಡ ಮೇಳಗಳ ಸಮ್ಮಿಶ್ರಣದೊಂದಿಗೆ ಸಂಜೆಯಿಂದ ಮಧ್ಯರಾತ್ರಿವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಭಕ್ತರು ರಸ್ತೆಗಳಲ್ಲಿ ನೀರು ಹೊಯ್ದು, ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿ, ರಂಗೋಲಿ ಬಿಡಿಸಿ, ಹಣ್ಣು –ಕಾಯಿಗಳನ್ನು ಗ್ರಾಮದೇವತೆಗೆ ಅರ್ಪಿಸಿ ಕೃತಾರ್ಥ ಭಾವ ಮೆರೆದರು.

ಶರಾವತಿ ಕಣಿವೆಯ ಕಾರ್ಗಲ್, ಜೋಗ, ಲಿಂಗನಮಕ್ಕಿಯಲ್ಲಿ ಹೊಸ ವರ್ಷದ ಆರಂಭದಲ್ಲಿ ಸಾಲು ಸಾಲು ಜಾತ್ರೆಗಳು ಆರಂಭವಾಗಿ ಮಾರಿಕಾಂಬಾ ಜಾತ್ರೆಯೊಂದಿಗೆ ಸಮಾರೋಪಗೊಳ್ಳುವುದು ವಿಶೇಷ.

ವಿದ್ಯುತ್ ಕಣ್ಣಾಮುಚ್ಚಾಲೆ: 3 ದಿನಗಳಿಂದ ಕಾರ್ಗಲ್ ಕೇಂದ್ರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯದಿಂದಾಗಿ ಗ್ರಾಮದಲ್ಲಿ ಕತ್ತಲು ಆವರಿಸಿತ್ತು. ಪಟ್ಟಣ ಪಂಚಾಯಿತಿಯ ಕುಡಿಯುವ ನೀರು ಪೂರೈಕೆ ಏರುಪೇರಾಗಿ ಜಾತ್ರೋತ್ಸವಕ್ಕೆ ಬಂದಿದ್ದ ಹೊರ ಊರಿನ ಭಕ್ತರು ಮತ್ತು ಸ್ಥಳೀಯರು ಪರದಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-42-1492618785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.