ಸಾಗರ: ‘ಸಹ್ಯಾದ್ರಿ ತಪ್ಪಲಿನಲ್ಲಿರುವ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಪ್ರಸ್ತಾವ ಬಂದಿರುವುದು ಪರಿಸರ ವಿರೋಧಿ ಧೋರಣೆಯಾಗಿದೆ’ ಎಂದು ವೃಕ್ಷಲಕ್ಷ ಆಂದೋಲನವು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

‘ಬೃಹತ್ ಯೋಜನೆಗಳನ್ನು ತಾಳಿಕೊಳ್ಳುವ ಧಾರಣಾ ಸಾಮರ್ಥ್ಯವನ್ನು ಪಶ್ಚಿಮಘಟ್ಟ ಪ್ರದೇಶವಿರುವ ಮಲೆನಾಡು ಈಗಾಗಲೇ ಕಳೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಸ್ಥಾಪನೆಯಾಗಿರುವ ಅಣು ವಿದ್ಯುತ್ ಸ್ಥಾವರದ ದುಷ್ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದು, ರಾಜ್ಯದಲ್ಲಿ ಮತ್ತೊಂದು ಸ್ಥಾವರ ಸ್ಥಾಪನೆಗೆ ಅವಕಾಶ ಮಾಡಿಕೊಡಬಾರದು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

‘ಬೇಸೂರು ಗ್ರಾಮ ಮಳೆ ಕಾಡು ಪ್ರದೇಶದಿಂದ ಆವೃತವಾಗಿದೆ. ಇಲ್ಲಿಗೆ ಸಮೀಪದ ಶರಾವತಿ ನದಿಯ ಹಿನ್ನೀರನ್ನು ಸಾಗರ ನಗರದ ಜನರಿಗೆ ಕುಡಿಯುವ ನೀರು ಪೂರೈಸಲು ಬಳಸಲಾಗುತ್ತಿದೆ. ಇಲ್ಲಿ ಸ್ಥಾವರ ಸ್ಥಾಪನೆಯಾದರೆ ಕಾಡು ನಾಶದ ಜೊತೆಗೆ ಹಿನ್ನೀರು ಮಲೀನಗೊಳ್ಳುವ ಅಪಾಯವಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಬೇಸೂರು ಗ್ರಾಮದಲ್ಲಿ ಸ್ಥಾವರ ಸ್ಥಾಪಿಸುವುದಿಲ್ಲ ಎಂದು ಕೂಡಲೇ ಸರ್ಕಾರ ಅಧಿಕೃತವಾಗಿ ಘೋಷಣೆ ಹೊರಡಿಸಬೇಕು’ ಎಂದು ಪ್ರಮುಖರಾದ ಅನಂತ ಹೆಗಡೆ ಅಶೀಸರ, ಡಾ.ಟಿ.ವಿ.ರಾಮಚಂದ್ರ, ಕೇಶವ ಕೊರ್ಸೆ, ಬಾಲಚಂದ್ರ ಸಾಯಿಮನೆ, ಶಾಂತಾರಾಮ್ ಸಿದ್ದಿ, ವೆಂಕಟೇಶ್ ಕವಲಕೋಡು, ಶ್ರೀಪಾದ ಬಿಚ್ಚುಗತ್ತಿ, ಬಿ.ಎಂ.ಕುಮಾರಸ್ವಾಮಿ, ವಾಮನ ಆಚಾರ್ಯ, ವೈ.ಬಿ.ರಾಮಕೃಷ್ಣ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-42-829909368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.