ಶಿವಮೊಗ್ಗ: ಮಲೆನಾಡಿನ ಜನರ ನೆಚ್ಚಿನ ಚಿನ್ನದ ಆಭರಣಗಳ ಸಂಸ್ಥೆ ‘ದಿ ಒರಿಜಿನಲ್ ಆಭರಣ’ (The Original Abharan)ದ ನೂತನ ಮತ್ತು ವಿಶಾಲವಾದ ಶೋರೂಂ ಅನ್ನು ನಗರದ ಕುವೆಂಪು ರಸ್ತೆಯ ಜೈಲ್ ಸರ್ಕಲ್ ಸಮೀಪ ಬುಧವಾರ ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.

ಸಮಾರಂಭದಲ್ಲಿ ಅಂಕಿತ ಅಮರ್, ಶ್ರೇಷ್ಟ ಭಂಡಾರಿ, ವಂದನಾ ಶಾನಭಾಗ್, ಗೀತಾ ಪೈ, ಗಜರದೇವಿ ಜಾಧವ್, ಶೈಲಶ್ರೀ ಕಾಮತ್, ರಂಗಲಕ್ಷ್ಮಿ ಸುಬ್ರಹ್ಮಣ್ಯಮ್ ಸೇರಿದಂತೆ ಗಣ್ಯರು ಭಾಗವಹಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ವಿಶಿಷ್ಟ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹದ ಅನಾವರಣ ಸಮಾರಂಭವು ನೆರೆದ ಜನಸ್ತೋಮದ ಕಣ್ಮನ ಸೆಳೆಯಿತು.

ಚಿನ್ನದ ವಿಭಾಗವನ್ನು ಉದ್ಯಮಿ ಭಾಸ್ಕರ್ ಜಿ. ಕಾಮತ್, ರೋಹಿಣಿ ಜಗದೀಶ್ ಪೈ ಮತ್ತು ಮೃದುಲಾ ರಂಜನ್ ಪೈ ಅನಾವರಣಗೊಳಿಸಿದರು. ಬೆಳ್ಳಿಯ ವಿಭಾಗವನ್ನು ಶ್ರೀನಿಧಿ ಟೆಕ್ಸ್ಟೈಲ್ಸ್ನ ಅಶ್ವತ್ ನಾರಾಯಣ ಶೆಟ್ಟಿ ದಂಪತಿ ಉದ್ಘಾಟಿಸಿದರು. ವಜ್ರದ ವಿಭಾಗಕ್ಕೆ ನಟಿಯರಾದ ಅಂಕಿತಾ ಅಮರ್ ಮತ್ತು ಶ್ರೇಷ್ಟ ಭಂಡಾರಿ ಚಾಲನೆ ನೀಡಿದರು. ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿ. ವಿಶ್ವಾಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

‘ಹೊಸ ಶೋರೂಂ ಅತ್ಯಾಧುನಿಕ ಹಾಗೂ ಐಷಾರಾಮಿ ಅನುಭವ ನೀಡುವಂತೆ ವಿನ್ಯಾಸಗೊಂಡಿದೆ. ಪಾರಂಪರಿಕ ಮತ್ತು ನವೀನ ಮಾದರಿಯ ಬಂಗಾರ, ವಜ್ರ ಹಾಗೂ ಮದುವೆಯ ಆಭರಣಗಳ ವಿಶೇಷ ಸಂಗ್ರಹವನ್ನು ಹೊಂದಿದೆ ಎಂದು ‘ದಿ ಒರಿಜಿನಲ್ ಆಭರಣ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಎಂ.ಕಾಮತ್ ತಿಳಿಸಿದರು.

ವಜ್ರದ ಆಭರಣಗಳ ವಿಭಾಗ ಉದ್ಘಾಟಿಸಿದ ನಟಿ ಅಂಕಿತಾ ಅಮರ್, ಮಾತು ಬೆಳ್ಳಿ, ಮೌನ ಬಂಗಾರವಾಗಿದೆ. ಬೆಳ್ಳಿ, ಚಿನ್ನ ಅಲಂಕಾರಕ್ಕೆ ಹಾಗೂ ಮಹಿಳೆಯರಿಗೆ ಸೀಮಿತವಾಗಿಲ್ಲ. ಪುರುಷರನ್ನೂ ಅಂದಗಾಣಿಸುತ್ತವೆ. ಆಭರಣ ನಮ್ಮೆಲ್ಲರ ಜೀವನದಲ್ಲಿ ತುಂಬಾ ಅಮೂಲ್ಯವಾಗಿದ್ದು, ಚಿನ್ನವನ್ನು ಸೂರ್ಯನಿಗೆ, ಬೆಳ್ಳಿಯನ್ನು ಚಂದ್ರನಿಗೆ ಹಾಗೂ ಚಿನ್ನ, ಬೆಳ್ಳಿಯನ್ನು ಭೂತಾಯಿಗೆ ಹೋಲಿಸುತ್ತೇವೆ ಎಂದರು.

ಆಭರಣ ಸಂಸ್ಥೆಯ ಸುಭಾಷ್ ಎಂ. ಕಾಮತ್ ಹಾಗೂ ಮಧುಕರ್ ಎಸ್. ಕಾಮತ್, ಮಹೇಶ್ ಎಂ.ಕಾಮತ್, ವೀಣಾ ಎಂ.ಕಾಮತ್, ಸಾತ್ವಿಕ್ ಕಾಮತ್, ಆಕರ್ಷ ಕಾಮತ್, ಶ್ಲೋಕಾ ಕಾಮತ್ ಮತ್ತು ಅದಿತ್ರಿ ಕಾಮತ್ ಅವರನ್ನೊಳಗೊಂಡ ಬಳಗವು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತು.

ಕಾರ್ಯಕ್ರಮವನ್ನು ಆರ್.ಜೆ. ನಿಕಿತಾ ಮತ್ತು ಗೌರಿ ಕಾರ್ನಾಡ್ ನಿರೂಪಿಸಿದರು. ಸಂಸ್ಥೆಯ ಗ್ರಾಹಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-42-1621342779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.