ಶಿವಮೊಗ್ಗ: ‘ಪೊಲೀಸ್ ಇಲಾಖೆ ಹೊಸದಾಗಿ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (ಎಲ್ಎಚ್ಬಿಎಸ್) ವ್ಯವಸ್ಥೆ ಜಾರಿಗೊಳಿಸಿದ್ದು, ಜಿಲ್ಲೆಯ ಜನರು ಇನ್ನು ಮುಂದೆ ಕಳ್ಳತನದ ಭಯವಿಲ್ಲದೇ ಮನೆಗೆ ಬೀಗ ಹಾಕಿಕೊಂಡು ಹಬ್ಬ–ಹರಿದಿನ, ಮದುವೆ, ಪ್ರವಾಸ ಹೀಗೆ ವಾರಗಟ್ಟಲೇ ಹೊರಗೆ ತೆರಳಬಹುದು’ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದರು.

‘ಮನೆಯಿಂದ ಹೊರಗೆ ಹೋಗುವ ಮುನ್ನ ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 8277982901ಕ್ಕೆ ಮನೆಯಿಂದ ಹೊರಗೆ ಹೋಗುವ ಹಾಗೂ ಮರಳಿ ಬರುವ ದಿನಾಂಕ, ಮನೆಯ ಪೂರ್ಣ ವಿಳಾಸ ಮತ್ತು ಲೊಕೇಷನ್, ಸೆಲ್ಫಿಯೊಂದಿಗೆ ಮನೆಯ ಮುಂಭಾಗದ ಒಂದು ಫೋಟೊ ವಾಟ್ಸ್ಆ್ಯಪ್ ಮಾಡಬೇಕಿದೆ. ಇಲ್ಲವೇ ಕ್ಯುಆರ್ಕೋಡ್ ಸ್ಕ್ಯಾನ್ ಮಾಡಿ ಅದರಲ್ಲಿ ವಿವರ ದಾಖಲಿಸಬಹುದಾಗಿದೆ. ಆಗ ಸಂಬಂಧಿಸಿದವರ ಮನೆಯ ಸುರಕ್ಷತೆಯ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಳ್ಳಲಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮನೆಗೆ ಬೀಗ ಹಾಕಿ ಹೆಚ್ಚು ಸಮಯ ಹೊರಗೆ ಹೋಗುವಾಗ ಗೇಟಿಗೆ ಬೀಗ ಹಾಕಿದಲ್ಲಿ, ಮನೆಯ ಮುಂದೆ ದಿನಪತ್ರಿಕೆ ಇಲ್ಲವೇ ಹಾಲಿನ ಪಾಕೆಟ್ ಬಿದ್ದಿರುವುದು ಕಂಡುಬಂದಲ್ಲಿ ಇಲ್ಲವೇ ಪ್ರವಾಸಕ್ಕೆ ಹೋಗುವ ಬಗ್ಗೆ ಇಲ್ಲವೇ ಪ್ರವಾಸಿ ತಾಣಗಳ ಮುಂದೆ ನಿಂತು ತೆಗೆಸಿಕೊಂಡ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದಲ್ಲಿ ಅದು ಕಳ್ಳರಿಗೆ ಆಹ್ವಾನ ಕೊಟ್ಟಂತೆ. ಸಾರ್ವಜನಿಕರು ಆ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಿ ಎಲ್ಎಚ್ಬಿಎಸ್ ವ್ಯವಸ್ಥೆಯ ಸಹಕಾರ ಪಡೆಯಬೇಕು’ ಎಂದು ಎಸ್ಪಿ ಸಲಹೆ ನೀಡಿದರು.

ಗಾಂಜಾ, ಶೂನ್ಯ ಸಹಿಷ್ಣುತೆ ಮುಂದುವರಿಕೆ: ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ‘ಶೂನ್ಯ ಸಹಿಷ್ಣುತೆ’ (ಝೀರೊ ಟಾಲರೆನ್ಸ್) ನೀತಿ ಅನುಸರಿಸುತ್ತಿದೆ. ಅದಕ್ಕೆ ಪೂರಕವಾಗಿ ಜನವರಿ 1ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 266 ಪ್ರಕರಣ ದಾಖಲಾಗಿದ್ದು, 290 ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಮಾರಾಟ, ಸಂಗ್ರಹಕ್ಕೆ ಸಂಬಂಧಿಸಿದಂತೆ 18 ಪ್ರಕರಣಗಳಲ್ಲಿ 40 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 284 ಪ್ರಕರಣಗಳಲ್ಲಿ 330 ಜನರನ್ನು ಬಂಧಿಸಿ, 30 ಕೆ.ಜಿ ಗಾಂಜಾ ಮತ್ತು 125 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಅಂದಾಜು ₹27,37,000’ ಎಂದು ತಿಳಿಸಿದರು.

‘ನಗರದಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ಜರುಗಿಸಲು ‘ಅಕ್ಕ ಪಡೆ’ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಒಟ್ಟು 156 ವ್ಯಕ್ತಿಗಳ ವಿರುದ್ಧ ಲಘು ಪ್ರಕರಣಗಳನ್ನು ದಾಖಲಿಸಿ ಎಚ್ಚರಿಕೆ ನೀಡಲಾಗಿದೆ’ ಎಂದರು.

ಎಎಸ್ಪಿ ಬಿ.ಕಾರಿಯಪ್ಪ, ಡಿವೈಎಸ್ಪಿ ಬಾಬು ಆಂಜಿನಪ್ಪ, ಇನ್ಸ್ಪೆಕ್ಟರ್ ಹರೀಶ್ ಕೆ.ಪಟೇಲ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-42-1823490459

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.