ಸಾಗರ: ‘ಎಲ್ಲೇ ಕೆರೆಗಳ ಅಭಿವೃದ್ಧಿ ಕೈಗೊಂಡರೂ ಅದಕ್ಕೆ ಕೈಜೋಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಯಾಗಿದೆ’ ಎಂದು ಕರ್ಣಾಟಕ ಬ್ಯಾಂಕ್ನ ಶಿವಮೊಗ್ಗ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಸಂಜೀವ್ ಕುಮಾರ್ ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಮಡಸೂರು–ಲಿಂಗದಹಳ್ಳಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ಕರ್ಣಾಟಕ ಬ್ಯಾಂಕ್ನಿಂದ ಸೋಮವಾರ ಸಹಾಯಧನ ವಿತರಿಸಿ ಮಾತನಾಡಿದರು.

‘ಕೆರೆಗಳ ಪುನಶ್ಚೇತನದಿಂದ ಆಯಾ ಭಾಗದ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ಕೃಷಿ ಕಾರ್ಯಗಳಿಗೆ ಅನುಕೂಲವಾಗುವ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ಸಹಕಾರಿಯಾಗುತ್ತದೆ. ಕುಡಿಯುವ ನೀರಿನ ಬಾವಿಗಳನ್ನು ಕೆರೆಯ ನೀರು ಕಾಯಕಲ್ಪದಂತೆ ಕಾಪಾಡುತ್ತದೆ’ ಎಂದರು.

‘ಮಡಸೂರು–ಲಿಂಗದಹಳ್ಳಿ ಗ್ರಾಮದ ಕೆರೆಯು ಸಾಗರ–ಸೊರಬ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಪುನಶ್ಚೇತನಗೊಂಡ ಕೆರೆ ಮತ್ತೆ ಮಲಿನಗೊಳ್ಳದಂತೆ ಜಾಗೃತಿ ವಹಿಸಬೇಕಿದೆ. ತ್ಯಾಜ್ಯಗಳನ್ನು ಕೆರೆಗೆ ಸುರಿಯುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದನ್ನು ತಡೆಯುವತ್ತ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.

ಕರ್ಣಾಟಕ ಬ್ಯಾಂಕ್ನ ಸಿಎಸ್ಆರ್ ನಿಧಿಯಿಂದ ಲಿಂಗದಹಳ್ಳಿ ಕೆರೆ ಅಭಿವೃದ್ಧಿಗೆ ₹ 15 ಲಕ್ಷ ಮಂಜೂರಾಗಿದ್ದು, ಈಗಾಗಲೇ ₹ 10 ಲಕ್ಷ ಪಾವತಿಸಲಾಗಿದೆ. ಕೊನೆಯ ಕಂತಿನಲ್ಲಿ ₹ 5 ಲಕ್ಷ ನೀಡಲಾಗಿದೆ. ಈ ಹಣವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡಿರುವುದು ಸಂತಸ ತಂದಿದೆ’ ಎಂದರು.

ಗ್ರಾಮಸ್ಥರ ಪರವಾಗಿ ಶ್ರೀ ರಾಮ ಮೆಮೋರಿಯಲ್ ಫೌಂಡೇಷನ್ನ ಮ್ಯಾನೇಜಿಂಗ್ ಟ್ರಸ್ಟಿ ಎಲ್. ಸುಬ್ರಾಯ ನೆರವಿನ ಹಣ ಸ್ವೀಕರಿಸಿದರು. ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ರಾಮಮೂರ್ತಿ, ಪ್ರಮುಖರಾದ ಎಲ್.ಕೆ. ದೇವಪ್ಪ, ಲಕ್ಷ್ಮಿನಾರಾಯಣ, ವೆಂಕಟೇಶ್ ರಾವ್, ವೆಂಕಟೇಶ್ ಎಲ್.ಆರ್., ಶಮಂತ, ವಿನುತಾ, ಸಾವಿತ್ರಿ, ನೇತ್ರಾವತಮ್ಮಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-42-37714464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.