ಸಾಗರ: ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ಪ್ರಸ್ತಾವದ ವಿರುದ್ಧ ಪಕ್ಷಾತೀತ ಪ್ರತಿಭಟನೆ ನಡೆಸಲು ಕೋಳೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ವಿವಿಧ ಪಕ್ಷಗಳ ಮುಖಂಡರು ಗ್ರಾಮಸ್ಥರ ಜಾಗೃತ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಸ್ಥಾವರ ಪ್ರಸ್ತಾಪವನ್ನು ಖಂಡಿಸುವ, ಯಾವುದೇ ಕಾರಣಕ್ಕೂ ಈ ಭಾಗದ ಭೂ–ಪ್ರದೇಶವನ್ನು ಸ್ಥಾವರ ಸ್ಥಾಪನೆಗೆ ಬಿಟ್ಟು ಕೊಡದ, ಅಧಿಕೃತವಾಗಿ ಸ್ಥಾವರ ಸ್ಥಾಪನೆ ಪ್ರಸ್ತಾಪವಿಲ್ಲ ಎಂಬ ಪ್ರಕಟಣೆ ಬರುವವರೆಗೂ ನಿರಂತರ ಹೋರಾಟ ನಡೆಸಬೇಕು’ ಎಂಬ ನಿರ್ಣಯವನ್ನು ಸಭೆಯಲ್ಲಿ ಸ್ವೀಕರಿಸಲಾಯಿತು.

‘ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅದರ ದುಷ್ಪರಿಣಾಮ ಕೇವಲ ಬೇಸೂರು ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ಮಲೆನಾಡು ಪ್ರದೇಶದ ಮೇಲೆ ಆಗುತ್ತದೆ. ಈ ಪ್ರಸ್ತಾಪದ ವಿರುದ್ಧ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸ್ವರೂಪದ ಹೋರಾಟ ರೂಪಿಸುವುದು ಅನಿವಾರ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಹೇಳಿದರು.

‘ರಾಜ್ಯದ ಮುಖ್ಯ ಕಾರ್ಯದರ್ಶಿ ಸ್ಥಾವರ ಸ್ಥಾಪನೆ ಸಂಬಂಧ ಭೂ ಪ್ರದೇಶದ ವಿವರ ಕೇಳಿದಾಗ ಶಿವಮೊಗ್ಗದ ಜಿಲ್ಲಾಧಿಕಾರಿ ಸರಿಯಾದ ಮಾಹಿತಿ ನೀಡದೆ ತಪ್ಪು ಮಾಡಿದ್ದಾರೆ. ಬೇಸೂರು ಗ್ರಾಮದಲ್ಲಿರುವ ಭೂ–ಪ್ರದೇಶ ಲಿಂಗನಮಕ್ಕಿ ಅಣೆಕಟ್ಟೆಗೆ ಹತ್ತಿರದಲ್ಲಿದೆ. ಇಲ್ಲಿನ ಜನ ಈಗಾಗಲೇ ಎರಡು ಬಾರಿ ಮುಳುಗಡೆ ಸಂತ್ರಸ್ತರಾಗಿದ್ದಾರೆ ಎಂಬ ಮಾಹಿತಿಯನ್ನು ಅವರು ನೀಡಬೇಕಿತ್ತು’ ಎಂದರು.

‘ಅಣು ಸ್ಥಾವರ ಸ್ಥಾಪನೆಯಂತಹ ಪ್ರಮುಖವಾದ ವಿಷಯ ಪ್ರಸ್ತಾಪವಾದಾಗ ಈ ಬಗ್ಗೆ ಮಾಹಿತಿ ನೀಡುವ ಮುನ್ನ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ, ಸಂಬಂಧಪಟ್ಟ ಶಾಸಕರ ಗಮನಕ್ಕೆ ತರಬೇಕಿತ್ತು. ಅವರ ಗಮನಕ್ಕೆ ಬಾರದಂತೆ ಮಾಹಿತಿ ನೀಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಬೇಸೂರು ಗ್ರಾಮವಿರುವ ಪ್ರದೇಶವನ್ನು ವನ್ಯಜೀವಿ ವಲಯ ಎಂದು ಘೋಷಿಸಲಾಗಿದೆ. ಈಗಾಗಲೇ ಇಲ್ಲಿನ ಜನ ಮುಳುಗಡೆ ಸಂತ್ರಸ್ತರಾಗಿದ್ದು ಅವರಿಗೆ ಪರಿಹಾರ ದೊರಕಿಲ್ಲ. ಹೀಗಿರುವಾಗ ಮತ್ತೊಂದು ಬೃಹತ್ ಯೋಜನೆಯನ್ನು ತಾಳಿಕೊಳ್ಳುವ ಧಾರಣಾ ಸಾಮರ್ಥ್ಯ ಈ ಪ್ರದೇಶಕ್ಕಿಲ್ಲ ಎಂಬುದನ್ನು ಕೇಂದ್ರ, ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ ಹೇಳಿದರು.

‘ಸ್ಥಾವರ ಸ್ಥಾಪನೆಯ ವಿಷಯ ಪ್ರಸ್ತಾಪವಾಗಿರುವುದು ಮಲೆನಾಡಿನ ಜನರ ಆತಂಕಕ್ಕೆ ಕಾರಣವಾಗಿದೆ. ಗ್ರಾಮದ ಸ.ನಂ. 104, 82, 84, 90 ರಲ್ಲಿರುವ ಪ್ರದೇಶವನ್ನು ಸರ್ವೇ ಮಾಡಲು ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣಾ ಪತ್ರ ಕೇಳಿರುವುದು ಆಘಾತಕಾರಿ ಸಂಗತಿಯಾಗಿದೆ’ ಎಂದು ಆಪ್ಸ್ ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ತಿಳಿಸಿದರು.

‘ಶರಾವತಿ ನದಿಯ ಹಿನ್ನೀರನ್ನು ಸಾಗರದ ಜನತೆಗೆ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲಾಗುತ್ತಿದೆ. ಹಿನ್ನೀರ ಪ್ರದೇಶದಲ್ಲಿ ಸ್ಥಾವರ ಸ್ಥಾಪನೆಯಾದರೆ ನೀರು ಮಲೀನಗೊಂಡು ಜಲಕಂಟಕ ಎದುರಾಗುವ ಅಪಾಯವಿದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಆತಂಕ ವ್ಯಕ್ತಪಡಿಸಿದರು.

ಪ್ರಮುಖರಾದ ಕವಲಕೋಡು ವೆಂಕಟೇಶ್, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಸುವರ್ಣ ಟೀಕಪ್ಪ, ಸೀತಾರಾಮ್ ಕುರುವರಿ, ಸೋಮಶೇಖರ್ ಲ್ಯಾವಿಗೆರೆ, ಕೆ.ಎಂ.ಸೂರ್ಯನಾರಾಯಣ, ಅಶೋಕ ಸೂರಮನೆ, ನವೀನ್ ಗಿಣಿವಾರ, ವ.ಶಂ.ರಾಮಚಂದ್ರ ಭಟ್, ಶಿವಾನಂದ ಗೌಡ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-42-920128528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.