ಶಿವಮೊಗ್ಗ: ‘ಇಲ್ಲಿನ ಹೊಸಹಳ್ಳಿ– ಮತ್ತೂರಿನ ಸಂಕೇತಿ ಸಂಗೀತಾ ಸಭಾದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಮೇ 27ರಿಂದ 31ರವರೆಗೆ ಹೊಸಹಳ್ಳಿಯ ಗಮಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಸಭಾದ ಅಧ್ಯಕ್ಷ ಹೊಸಹಳ್ಳಿ ಕೆ.ವೆಂಕಟರಾಮ್ ತಿಳಿಸಿದರು.

‘ಸಭಾದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ವಿಶೇಷ ಸಂಗೀತ ಕಾರ್ಯಕ್ರಮದೊಂದಿಗೆ ನಡೆಸಲು ಸಿದ್ಧತೆ ಕೈಗೊಂಡಿದ್ದೇವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉತ್ಸವವನ್ನು ಮೇ 27ರ ಸಂಜೆ 5.30ಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್. ಛಲವಾದಿ, ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ವಹಿಸಲಿದ್ದಾರೆ. ಮೇ 27, 28 ಮತ್ತು 29ರಂದು ಸಂಜೆ 6.30ರಿಂದ 9.30ರವರೆಗೆ ಸಂಗೀತಾ ವಿದ್ವಾಂಸರಿಂದ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಸಂಗೀತ ಪ್ರಾತ್ಯಕ್ಷಿಕೆ ಕೂಡ ಜರುಗಲಿದೆ’ ಎಂದು ಸಭಾದ ಸದಸ್ಯ ನಾಗರಾಜ್ ಮಾಹಿತಿ ನೀಡಿದರು.

‘ಮೇ 31ರ ಸಂಜೆ 6.30ಕ್ಕೆ ವಿದುಷಿ ಟಿ.ಎಸ್.ಸತ್ಯವತಿ ಸಮಾರೋಪ ಭಾಷಣ ಮಾಡಲಿದ್ದು, ಮತ್ತೂರು– ಹೊಸಹಳ್ಳಿ ಪುರೋಹಿತ ಲಕ್ಷ್ಮೀ ಕೇಶವ ಅವಧಾನಿ, ಸಂಸ್ಕೃತ ವಿದ್ವಾಂಸ ಕೇಶವ ಅವಧಾನಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಚ್.ಆರ್.ಸುಬ್ರಮಣ್ಯ ಶಾಸ್ತ್ರಿ, ಟಿ.ಆರ್. ನಾಗೇಶ್, ಎಚ್.ಎಸ್.ನಾರಾಯಣ, ಮರಣೋತ್ತರವಾಗಿ ಎಚ್.ಎಸ್. ರಾಮಮೂರ್ತಿ ಅವರನ್ನು ಗೌರವವಿಸಲಾಗುವುದು’ ಎಂದರು.

ಅನಂತ ಪದ್ಮನಾಭ, ಮಧು ಮುರುಳಿ, ಎಚ್.ಆರ್.ಕೇಶವಮೂರ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-42-319390618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.