ಪರಿಸರಕ್ಕೆ ಮಾರಕವಾದ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಕೈ ಹಾಕಿರುವುದು ತಪ್ಪು. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಈ ಯೋಜನೆ ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಲಿ
ಡಾ.ಶಿವರಾಮಕೃಷ್ಣ, ನರರೋಗ ತಜ್ಞ, ಶಿವಮೊಗ್ಗ
ಮಲೆನಾಡಿನಲ್ಲಿ ಈಗಾಗಲೇ 38ರಿಂದ 40 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಅನುಭವಿಸುತ್ತಿದ್ದೇವೆ. ಯೋಜನೆಗಾಗಿ 16,000 ಮರ ಕಡಿಯಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ
ಬಿ.ಎಂ.ಕುಮಾರಸ್ವಾಮಿ, ಪರಿಸರ ಹೋರಾಟಗಾರ
ಯೋಜನೆ ಜಾರಿಗೊಳಿಸಲು ಮುಂದಾದರೆ ಸಚಿವ ಜಾರ್ಜ್ ಅವರಿಗೆ ಶಿವಮೊಗ್ಗ ಪ್ರವೇಶ ನೀಡುವುದಿಲ್ಲ. ನಾವು ಬಳೆ ತೊಟ್ಟಿಲ್ಲ. ಪರಿಸರಕ್ಕೆ ಮಾರಕವಾದ ಯೋಜನೆಯ ಅಲ್ಲಿಂದ ಹೇರಿದರೆ ನಾವು ಒಪ್ಪುವುದಿಲ್ಲ