ಶಿವಮೊಗ್ಗ: ‘ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಏ. 2ರಿಂದ 5ರ ವರೆಗೆ ‘ಶೆಟ್ಟರ ಸಂತೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಂಗವಾಗಿ ನಾಲ್ಕು ದಿನಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

‘ಏ. 2ರಂದು ಸಂಜೆ 6.30ಕ್ಕೆ ಶಿವಮೊಗ್ಗದ ಹೆಸರಾಂತ ಕಲಾವಿದರಿಂದ ಹಳೆಯ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ಸುಂದರ ಪುಷ್ಪಹಾರ–ಪಂಚಮವೇದ–ಪ್ರೇಮದ ನಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಏ.3ರಂದು ಸಂಜೆ 5 ಗಂಟೆಯಿಂದ ಶ್ರೀವಾರಿ ಫೌಂಡೇಷನ್ ಬೆಂಗಳೂರು ಅವರಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಏ.4ರಂದು ಸಂಜೆ 6ಗಂಟೆಯಿಂದ ಶಿವಮೊಗ್ಗದ ಗಾಂಧಿಬಜಾರ್ನ ವಾಸವಿ ಮಹಿಳಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಏ.5ರಂದು ಭಾನುವಾರ ಸಂಜೆ 6.30ರಿಂದ ವಾಸುದೀಕ್ಷಿತ್ ತಂಡದವರಿಂದ ‘ಭಜನಾ ಜಾಮ್ಮಿಂಗ್’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಡಾ.ಭರತ್, ಅಶ್ವತ್ಥ್, ಶ್ರೀನಾಗ್, ನಾಗರಾಜ್ ಶೆಟ್ಟರ್, ಶ್ರೀನಾಥ್, ವಿದ್ಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-42-2087916808

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.