ಸಾಗರ: ‘ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವುದರಿಂದ ತಾಲ್ಲೂಕಿನ ಕರೂರು–ಭಾರಂಗಿ ಹೋಬಳಿಯ ಶರಾವತಿ ಮುಳುಗಡೆ ಸಂತ್ರಸ್ತರ ಶಾಪ ವಿಮೋಚನೆಯಾದಂತಾಗಿದೆ’ ಎಂದು ಸಾಂಬಾರು ಮಂಡಳಿ ನಿರ್ದೇಶಕ ಪ್ರಸನ್ನ ಕೆರೆಕೈ ಹೇಳಿದರು.

ಸಮೀಪದ ಸಿರಿವಂತೆ ಗ್ರಾಮದಲ್ಲಿ ಚಿತ್ರಸಿರಿ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ನಿರಂತರ ಪರಿಶ್ರಮ, ಬದ್ಧತೆ ಇದ್ದರೆ ಎಂತಹ ಕ್ಲಿಷ್ಟ ಸಮಸ್ಯೆಗಳಿಗೂ ತಾರ್ಕಿಕ ಅಂತ್ಯ ದೊರಕಬಲ್ಲದು ಎಂಬುದಕ್ಕೆ ಸಿಗಂದೂರು ಸೇತುವೆ ನಿರ್ಮಾಣ ಹೋರಾಟಕ್ಕೆ ಸಿಕ್ಕಿರುವ ಜಯವೇ ಸಾಕ್ಷಿ’ ಎಂದರು.

‘ಭೂ ರಹಿತರಿಗೆ ಭೂಮಿಯ ಹಕ್ಕು ಕೊಡಿಸುವ ಕಾಗೋಡು ಸತ್ಯಾಗ್ರಹದಂತಹ ಪ್ರಮುಖ ಹೋರಾಟ ನಡೆದ ನೆಲವಿದು. ಈ ಕಾಲಘಟ್ಟದಲ್ಲಿ ಮಲೆನಾಡಿನ ಯುವ ಸಮೂಹ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಸಕಾಲ’ ಎಂದು ಹೇಳಿದರು.

‘ಜೀವನದಲ್ಲಿ ಎಂತಹ ಸ್ಥಿತಿಗೆ ತಲುಪಿದರೂ ಬಾಲ್ಯದಲ್ಲಿ ಕಳೆದ ಕಷ್ಟದ ದಿನಗಳನ್ನು ಮರೆಯಬಾರದು. ಅದೇ ರೀತಿ ಕಷ್ಟದಲ್ಲಿ ನೆರವಾದವರನ್ನು ಸ್ಮರಿಸಬೇಕು. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸಿನತ್ತ ಸಾಗುವುದೇ ಜೀವನದ ಗುರಿಯಾಗಬೇಕು’ ಎಂದು ಸಿರಿಗೌರಿ ಪ್ರಶಸ್ತಿ ಸ್ವೀಕರಿಸಿದ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸರೋಜ ಪಿ. ಚಂಗೊಳ್ಳಿ ತಿಳಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಪ್ರಶಸ್ತಿಗಳ ಹಿಂದೆ ಒಂದು ರೀತಿಯ ಯಾಂತ್ರಿಕತೆ ಇರುತ್ತದೆ. ಸ್ಥಳೀಯವಾಗಿ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿಯ ಹಿಂದೆ ಹೃದಯವಂತಿಕೆ ಇರುತ್ತದೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜವಾದಿ ಮುಖಂಡ ಬಿ.ಆರ್. ಜಯಂತ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಯೋಗಪಟು ಬಳಸಗೋಡು ಗ್ರಾಮದ ನಮನ ಅವರಿಗೆ ಚಿಗುರು ಸಿರಿಗೌರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲ ವಿಜ್ಞಾನಿ ಅಭಿನಂದನ, ರಕ್ತದಾನಿ ಹಾಲೇಶ್, ಯೋಗ ಶಿಕ್ಷಕ ಶ್ರೀಧರ ಮೂರ್ತಿ, ಯೋಗಪಟುಗಳಾದ ಶೈಲಜಾ, ಜಯಮ್ಮ ಅವರನ್ನು ಅಭಿನಂದಿಸಲಾಯಿತು.

ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅನ್ನಪೂರ್ಣ ಎಚ್. ಅಭಿನಂದನಾ ಭಾಷಣ ಮಾಡಿದರು. ಶ್ರೀವಿದ್ಯಾ, ತನುಶ್ರೀ ಆಶಯ ಗೀತೆ ಹಾಡಿದರು. ಸಿರಿವಂತೆ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ಸಂಪಳ್ಳಿ, ರಮ್ಯ ತಾಳಗುಪ್ಪ ಅಭಿನಂದಿತರನ್ನು ಪರಿಚಯಿಸಿದರು. ಮೂರ್ತಿ, ರಾಘವೇಂದ್ರ ಜಾನಪದ ಗೀತೆಗಳನ್ನು ಹಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-42-1133952081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.