ಶಿವಮೊಗ್ಗ: ಬೆಂಗಳೂರಿನಲ್ಲಿ ಭಾನುವಾರ ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ನಿಧನರಾದ ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರ, ಸಹಾಯಕ ಕೋಚ್ ಎಸ್.ಎಲ್. ಅಕ್ಷಯ್ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಇಲ್ಲಿನ ರೋಟರಿ ಚಿತಾಗಾರದಲ್ಲಿ ನೆರವೇರಿತು.

ಬೆಂಗಳೂರಿನಿಂದ ನಸುಕಿನಲ್ಲಿ ಪಾರ್ಥಿವ ಶರೀರವನ್ನು ತಂದು ಇಲ್ಲಿನ ಅರವಿಂದ ನಗರದ ಮನೆಯಲ್ಲಿ ಇಡಲಾಗಿತ್ತು. ಮಧ್ಯಾಹ್ನ 1.30ಕ್ಕೆ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ರೋಟರಿ ಚಿತಾಗಾರಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಕೆಎಸ್ಸಿಎ ಶಿವಮೊಗ್ಗ ವಲಯದ ಮಾಜಿ ಸಂಚಾಲಕ ಹಾಗೂ ಅಕ್ಷಯ್ ಅವರ ಆರಂಭದ ಕೋಚ್ ಡಿ.ಆರ್.ನಾಗರಾಜ್, ಶಿಷ್ಯನ ನೆನಪಿಸಿಕೊಂಡು ಇಂದು ಕರ್ನಾಟಕ ಕ್ರಿಕೆಟ್ಗೆ, ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟರ್ಸ್ ಪಾಲಿಗೆ ಅತ್ಯಂತ ಕರಾಳ ದಿನ ಎನ್ನುತ್ತಾ ಗದ್ಗದಿತರಾದರು.

‘ಅಕ್ಷಯ್ ಸಣ್ಣ ಹುಡುಗನಿದ್ದಾಗ ಆತನ ಅಪ್ಪ ಲೋಕೇಶ್ ಕ್ರಿಕೆಟ್ ಆಡಲು ಕರೆತರುತ್ತಿದ್ದರು. ಆಟದಲ್ಲಿ ಆತನ ಉತ್ಸಾಹ ಕಂಡು ಅಕ್ಷಯ್ಗೆ ಟ್ಯಾಲೆಂಟ್ ತುಂಬಾ ಇದೆ. ಇಲ್ಲಿ ಬೇಡ ಬೆಂಗಳೂರಿಗೆ ಕಳಿಸೋಣ ಎಂದು ಆಗ ರಘುರಾಮ್ ಭಟ್ ಅವರಿಗೆ ಹೇಳಿ ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸೀಟ್ ಕೊಡಿಸಿದ್ದೆ. ಸ್ವಸ್ತಿಕ್ ಯೂನಿಯನ್ಗೆ ಆಡಲು ಆರಂಭಿಸಿದ್ದನು. ರಣಜಿ ಕ್ರಿಕೆಟ್ನಲ್ಲಿ ಅಕ್ಷಯ್ ಆಟವಾಡಲು ಆರಂಭಿಸಿದಾಗ ಆರ್. ವಿನಯಕುಮಾರ್, ಮಿಥುನ್, ಸ್ಟುವರ್ಟ್ ಬಿನ್ನಿ, ಶರತ್ ಹೀಗೆ ಘಟಾನುಘಟಿಗಳು ತಂಡದಲ್ಲಿದ್ದರು. ಅವರ ಮಧ್ಯದಲ್ಲಿ ಅಕ್ಷಯ್ ಆರು ರಣಜಿ ಪಂದ್ಯ ಆಡಿದ್ದಾನೆ’ ಎಂದು ಸ್ಮರಿಸಿದರು.

‘ಶಿವಮೊಗ್ಗದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಆಡುವ 11ರ ಬಳಗದಲ್ಲಿ ಅಕ್ಷಯ್ಗೆ ಅವಕಾಶ ಇರಲಿಲ್ಲ. ಆಗ ಕನ್ವಿನರ್ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಹೇಳಿ ಅಕ್ಷಯ್ಗೆ ಅವಕಾಶ ಕೊಡಿಸಿದ್ದೆ’ ಎಂದು ನೆನಪಿಸಿಕೊಂಡರು.

ಅಕ್ಷಯ್ ಮಿತಭಾಷಿ, ಆತನ ಕೆಲಸ ಹಿತ ಎಂದು ಹೇಳಿದ ಡಿ.ಆರ್.ನಾಗರಾಜ್, ವಿಧಿ ಆಟಕ್ಕೆ ತಲೆಕೊಡಲೇಬೇಕು. ದೇವರು ಆತನ ಆತ್ಮಕ್ಕೆ ಶಾಂತಿಕೊಡಲಿ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-44-816343329

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.