ಸೊರಬ: ‘ದಲಿತ ಸಮುದಾಯಕ್ಕೆ ಸೇರಿದ ನನ್ನ ಮೇಲೆ ಈಚೆಗೆ ಹಲ್ಲೆ ನಡೆದಿದ್ದು, ಸಂಸದ ಬಿ.ವೈ.ರಾಘವೇಂದ್ರ ನಮ್ಮ ಮನೆಗೆ ಬಂದು ಸಾಂತ್ವನ ಹೇಳುವ ಬದಲು ಆರೋಪಿಗಳ ಮನೆಗೆ ತೆರಳಿ ಅವರ ಪರ ಹೇಳಿಕೆ ನೀಡಿರುವುದು ಖಂಡನಾರ್ಹ’ ಎಂದು ಸಂತ್ರಸ್ತ ಮಹೇಂದ್ರ ಯಲವಳ್ಳಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಜೈ ಭೀಮ್ ಸೇನೆ ಹಾಗೂ ದಲಿತ ಸಂಘಟನೆಯ ಯುವ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಫೆ. 8ರಂದು ಯಲವಳ್ಳಿಯಲ್ಲಿ ಆರು ಮಂದಿ ನನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದರು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಮೇ 1ರಂದು ಬಿ.ವೈ. ರಾಘವೇಂದ್ರ ಅವರು ಆರೋಪಿಗಳ ಮನೆಗೆ ತೆರಳಿ ಅವರ ಪರ ‘ಬಿ’ ರಿಪೋರ್ಟ್ ಹಾಕಿಸುವುದಾಗಿ ಹೇಳಿದ್ದಾರೆ. ಹಲ್ಲೆಗೆ ಒಳಗಾಗಿ ಅನ್ಯಾಯವಾಗಿದ್ದು ನನಗೆ. ಆದರೆ, ಸಂಸದರು ಆರೋಪಿಗಳ ಪರ ಹೇಳಿಕೆ ನೀಡಿರುವುದು ನೋವಿನ ಸಂಗತಿ’ ಎಂದರು.

ದಲಿತ ಸಂಘಟನೆಯ ಯುವ ಸದಸ್ಯರಾದ ಮಾಲತೇಶ್, ಪ್ರಶಾಂತ್, ವಸಂತ, ಪ್ರವೀಣ್, ಅಣ್ಣಪ್ಪ, ರಮೇಶ್, ಗುರುಮೂರ್ತಿ, ಅವಿನಾಶ್ ಬಿಳವಾಣಿ ಸೇರಿ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-42-648150462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.