ಶಿವಮೊಗ್ಗ: ‘ತಾಂತ್ರಿಕ ಸಮಸ್ಯೆಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿರುವ ತುರ್ತು ಸಂದರ್ಭದಲ್ಲಿ ಬಳಸಬಹುದಾದ ‘ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂನ ಭಾಗವಾದ ಡಿಜಿಟಲ್ ಸ್ಮಾರ್ಟ್ ಪೋಲ್ಗಳು ಕಾರ್ಯ ನಿರ್ವಹಿಸುತ್ತಿಲ್ಲ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಭಾಗದ ಪ್ರಮುಖ ವೃತ್ತಗಳ 11 ಕಡೆಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಪೋಲ್ಗಳನ್ನು ನಿರ್ಮಿಸಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದ ಸ್ಮಾರ್ಟ್ ಪೋಲ್ಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

ನಗರದ ಪ್ರಮುಖ ವೃತ್ತದಲ್ಲಿ ಯಾವುದೇ ಅಪಘಾತ, ದೊಂಬಿ–ಗಲಭೆ ಸೇರಿದಂತೆ ಇತರೆ ದುರ್ಘಟನೆಗಳು ಜರುಗಿದರೆ, ಸಾರ್ವಜನಿಕರು ಈ ಸ್ಮಾರ್ಟ್ ಪೋಲ್ ನಲ್ಲಿರುವ ಎಸ್ಒಎಸ್ (ತುರ್ತು ಸಹಾಯಕ್ಕಾಗಿ) ಪ್ಯಾನಿಕ್ ಬಟನ್ ಒತ್ತಿ ಟ್ರಾಫಿಕ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು. ಘಟನೆಯ ಬಗ್ಗೆ ವಿವರಿಸಬಹುದು. ಇದರಿಂದ, ಕಂಟ್ರೋಲ್ ರೂಂ ಸಿಬ್ಬಂದಿ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡುವುದಲ್ಲದೆ ತಕ್ಷಣದ ಕ್ರಮಕ್ಕೆ ಮುಂದಾಗುತ್ತಾರೆ. ಅದೇ ರೀತಿ, ತುರ್ತು ಸೇವೆಗಳಿಗೆ ಮಾಹಿತಿ ರವಾನಿಸುತ್ತಾರೆ. ಆದರೆ, ಈ ಸೇವೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

ನಗರದ ಸರ್ಕಿಟ್ ಹೌಸ್ ಮುಖ್ಯ ವೃತ್ತದಲ್ಲಿರುವ ಸ್ಮಾರ್ಟ್ ಪೋಲ್ ಕಾರ್ಯ ನಿರ್ವಹಿಸುತ್ತಿದೆ. ಉಳಿದ ಸ್ಮಾರ್ಟ್ ಪೋಲ್ಗಳು ಕೆಲವೊಮ್ಮೆ ತಾಂತ್ರಿಕ ಸಮಸ್ಯೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಡಿಜಿಟಲ್ ಸ್ಮಾರ್ಟ್ ಪೋಲ್ಗಳನ್ನು ತುರ್ತು ಸಂದರ್ಭದಲ್ಲಿ ಬಳಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಶಾಲಾ– ಕಾಲೇಜು ಮಕ್ಕಳಿಗೆ ಇದನ್ನು ಬಳಸಲು ಡೆಮೊ ಕೂಡ ನೀಡಲಾಗಿದೆ. ಆದರೂ, ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ ಎಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರು ಸ್ಮಾರ್ಟ್ ಪೋಲ್ಗಳಿಂದ ಯಾವುದೇ ದೂರನ್ನೂ ದಾಖಲಿಸಿಲ್ಲ. ಆದರೆ, ಇದರಿಂದ ವಾಹನ ಸವಾರರಿಗೆ ಸಂಚಾರ ನಿಯಮದ ಅರಿವು ಮೂಡಿಸಲಾಗುತ್ತಿದೆ. ಸವಾರರು ಬಿಳಿ ಬಣ್ಣದ ಗೆರೆಯಿಂದ ಆಚೆಗೆ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಕಂಟ್ರೋಲ್ ರೂಂನಿಂದಲೇ ಆಗಾಗ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಚಾರಿ ಪೊಲೀಸ್ ಕಂಟ್ರೋಲ್ ರೂಂನ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ನಗರದಲ್ಲಿ ವಾಹನಗಳಿಂದ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿ ಹೊಸ ವಾಹನಗಳ ಖರೀದಿಯೂ ಹೆಚ್ಚುತ್ತಿದೆ. ಈ ಸಂಬಂಧ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಮತ್ತಷ್ಟು ಕ್ರಮ ವಹಿಸುವುದು ಅಗತ್ಯವಿದೆ. ಅದೇ ರೀತಿ, ನಗರದಲ್ಲಿ ವಾಹನಗಳ ನಿಲುಗಡೆಗೆ ಸಮಸ್ಯೆ ತಲೆ ದೂರಿದೆ. ಇದನ್ನು ನಿವಾರಿಸಬೇಕು ಎಂದು ಸ್ಥಳೀಯರಾದ ಎನ್. ರಾಜಶೇಖರ್ ತಿಳಿಸಿದರು.

ಕೆಲವೊಂದು ಕಡೆ ಸ್ಮಾರ್ಟ್ ಪೋಲ್ ಸಮಸ್ಯೆ ಇದೆ. ಇದನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ
ತಿರುಮಲೇಶ್ ಪಿಎಸ್ಐ ಸಂಚಾರ ಪೋಲಿಸ್ ಠಾಣೆ

ಏನಿದು ಸ್ಮಾರ್ಟ್ ಪೋಲ್ ?

ನಗರದ ಸರ್ಕಿಟ್ ಹೌಸ್ ಮಹಾವೀರ ವೃತ್ತ ಟಿ.ಸೀನಪ್ಪ ವೃತ್ತ ಸೇರಿದಂತೆ ಅನೇಕ ಕಡೆ ‘ಸ್ಮಾರ್ಟ್ ಪೋಲ್’ ಅಳವಡಿಸಲಾಗಿದೆ. ಇದರಲ್ಲಿ ಸೆನ್ಸಾರ್ ಸಿ.ಸಿ. ಟಿ.ವಿ ಕ್ಯಾಮೆರಾ ಧ್ವನಿವರ್ಧಕ ಸೇರಿದಂತೆ ಎಲ್ಇಡಿ ಪರದೆ ಕೂಡ ಇದೆ. ಪರದೆಯಲ್ಲಿ ಸಂಚಾರ ನಿಯಮದ ಮಾಹಿತಿಯು ದಿನದ 24 ಗಂಟೆಯೂ ಪ್ರದರ್ಶನವಾಗುತ್ತಿದೆ. ಪ್ರತಿ ಐದು ಸೆಕೆಂಡ್ಗೆ ಒಮ್ಮೆ ವಾಹನಗಳ ಮಾಹಿತಿ ಅಪ್ಡೇಟ್ ಆಗುವ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಮಾರ್ಟ್ ಪೋಲ್ಗಳ ಸ್ಥಳಗಳಲ್ಲಿ ಎಸ್ಒಎಸ್ ಬಟನ್ ಅಳವಡಿಕೆ ಮಾಡಲಾಗಿದೆ. ವಾಹನ ಚಾಲಕರು ಹಾಗೂ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಆ ಬಟನ್ ಒತ್ತಿದರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೆರವು ನೀಡಲಿದ್ದಾರೆ. ಹತ್ತಿರದ ಪೊಲೀಸ್ ಠಾಣೆಗೂ ಮಾಹಿತಿ ರವಾನೆ ಆಗಲಿದೆ.

ಸಿಗ್ನಲ್: ಡಿಜಿಟಲ್ಗೊಳಿಸಿ

ನಗರದ 13 ಕಡೆ ಸಂಚಾರ ನಿಯಮ ಫಲಕ (ಟ್ರಾಫಿಕ್ ಸಿಗ್ನಲ್) ಅಳವಡಿಸಲಾಗಿದೆ. ಜೊತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಕೂಡ ಕಣ್ಣಿಟ್ಟು ಕಾಯುತ್ತಿವೆ. ಆದರೂ ವಾಹನ ಸವಾರರು ನಿಯಮ ಪಾಲಿಸುತ್ತಿಲ್ಲ. ಸಿಗ್ನಲ್ ಜಂಪ್ ಮಾಡಿ ಮುಂದೆ ಸಾಗುತ್ತಿದ್ದಾರೆ. ಈ ಹಿಂದೆ 60 ಸೆಕೆಂಡ್ ಗಳಿಗೆ ಸಿಗ್ನಲ್ ಮಿತಿ ಇರಿಸಲಾಗಿತ್ತು. ಇತ್ತೀಚಿಗೆ ಇದನ್ನು ತೆಗೆಯಲಾಗಿದೆ. ಇದರಿಂದ ವಾಹನ ಸವಾರರು ಗೊಂದಲಕ್ಕೆ ಸಿಲುಕಿದ್ದಾರೆ. ಅದೇ ರೀತಿ ಹಸಿರು ದೀಪ ಬರುವವರೆಗೆ ಕಾಯುವ ತಾಳ್ಮೆ ಕಳೆದುಕೊಂಡಿದ್ದಾರೆ. ಆದ್ದರಿಂದ ಇದನ್ನು ಡಿಜಿಟಲ್ ಗೊಳಿಸಬೇಕು ಎಂದು ನಗರವಾಸಿಗಳ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.