ಶಿವಮೊಗ್ಗ: ‘ರಂಗಭೂಮಿ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ರೂಪಿಸುವ ಮಹತ್ವದ ಕಲೆಯಾಗಿದೆ. ಜನಸಾಮಾನ್ಯರಿಗೆ ಉತ್ತಮ ಸಂದೇಶ ಸಾರಲು ಇದು ಬಹುದೊಡ್ಡ ಮಾಧ್ಯಮ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಎನ್ಇಎಸ್ ಹವ್ಯಾಸಿ ರಂಗ ವೇದಿಕೆಯ ವತಿಯಿಂದ ಗುರುವಾರ ಎಸ್.ಆರ್.ಎನ್.ಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿ ಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿಭಿನ್ನ ಪ್ರಕಾರಗಳು ಒಂದೆಡೆ ಸೇರಿ ಪ್ರದರ್ಶನಗೊಳ್ಳುವಂತಹ ವಿಶೇಷತೆ ನಾಟಕದ ಮೂಲಕ ಸಾಧ್ಯ. ಕಲೆಯು ಜೀವಂತವಾಗಿರಬೇಕು ಎಂಬುದು ಅತ್ಯಂತ ಮುಖ್ಯ. ನಾಟಕ ದಲ್ಲಿ ಜೀವಂತಿಕೆ ಇದ್ದಾಗ ಮಾತ್ರ ಅದು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತದೆ. ಕಲೆ ಜನರ ಬದುಕಿನ ಪ್ರತಿಬಿಂಬವಾಗಿರಬೇಕು’ ಎಂದು ಹೇಳಿದರು.

‘ರಂಗದಲ್ಲಿ ಮನರಂಜನೆಯ ಜೊತೆಗೆ ಸಂದೇಶ ಸಾರುವತ್ತ ಹೆಚ್ಚು ಗಮನವಹಿಸಬೇಕು. ನಾಟಕದ ಸಂದೇಶಗಳು ಅನೇಕ ಜನ ಸಾಮಾನ್ಯರ ಬದುಕನ್ನು ಬದಲಿಸಿದೆ. ಬಿ.ಇಡಿ ವಿದ್ಯಾರ್ಥಿಗಳು ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು’ ಎಂದು ರಂಗಕರ್ಮಿ ಬಿ.ಆರ್.ರೇಣುಕಪ್ಪ ಸಲಹೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಕೆ.ಚಿದಾನಂದ ಮಾತನಾಡಿ, ‘ರಂಗಭೂಮಿ ಎಂಬುದು ಮನಸ್ಸುಗಳ ಕಟ್ಟುವ ಕಲೆ. ಇಲ್ಲಿ ನಟನೆಯ ನೇರ ಅನುಷ್ಠಾನವು ವೇದಿಕೆಯ ಮೇಲೆ ನಡೆಯುತ್ತದೆ’ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಪಿ.ನಾರಾಯಣ್ ಮಾತನಾಡಿದರು. ಇದೇ ವೇಳೆ ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಐನಬೈಲು ಹಾಗೂ ಬಿ.ಆರ್.ರೇಣುಕಪ್ಪ ಅವರನ್ನು ಅಭಿನಂದಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-42-876771523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.