ಶಿವಮೊಗ್ಗ: ಇಲ್ಲಿನ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹೊಳೆಹೊನ್ನೂರು ಹಾಗೂ ಶಿವಮೊಗ್ಗ ಕಸಬಾ ಹೋಬಳಿ ವ್ಯಾಪ್ತಿಯ ತುಂಗ ಹಾಗೂ ಭದ್ರಾ ನದಿಗಳಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

ಹೊಳೆಹೊನ್ನೂರು, ನಾಗತಿಬೆಳಗಲು, ಹೊಳೆಬೆನವಳ್ಳಿ, ಸಿದ್ಲೀಪುರ, ಸನ್ಯಾಸಿ ಕೊಡಮಗ್ಗೆ, ಮಂಗೋಟೆ, ಆನವೇರಿ, ನಾಗಸಮುದ್ರ, ಹಾಡೋನಹಳ್ಳಿ, ಪುರಲೆ ಭಾಗದಲ್ಲಿ ಎರಡೂ ನದಿಗಳಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸಲಾಗುತ್ತಿದೆ.

‘ಮೊದಲೆಲ್ಲ ರಾತ್ರಿ ವೇಳೆ ಮರಳು ಸಾಗಣೆ ನಡೆಯುತ್ತಿತ್ತು. ಈಗ ಹಗಲು ಹೊತ್ತಿನಲ್ಲೇ ದಂಧೆ ನಡೆಯುತ್ತಿದೆ. ತುಂಗ ಹಾಗೂ ಭದ್ರಾ ನದಿಗಳಿಂದ ಅಕ್ರಮವಾಗಿ ತೆಗೆದ ಮರಳನ್ನು ಟ್ರ್ಯಾಕ್ಟರ್ ಹಾಗೂ ಟಿಪ್ಪರ್ಗಳಲ್ಲಿ ರಾಜಾರೋಷವಾಗಿ ಕೊಂಡೊಯ್ಯಲಾಗುತ್ತಿದೆ. ಇಷ್ಟೆಲ್ಲಾ ಆದರೂ ಇಲ್ಲಿನ ಆಡಳಿತ ಮಾತ್ರ ಕಣ್ಣುಮುಚ್ಚಿ ಕುಳಿತಿದೆ’ ಎಂದು ಹೊಳೆಹೊನ್ನೂರು ಪಟ್ಟಣದ ನಿವಾಸಿ ಶಿವಾನಂದಪ್ಪ ಆರೋಪಿಸುತ್ತಾರೆ.

ಸಿದ್ಲೀಪುರ ಭಾಗದಲ್ಲಿ ರಾಜಕೀಯ ಪಕ್ಷವೊಂದರ ಜಿಲ್ಲಾ ಮಟ್ಟದ ಪದಾಧಿಕಾರಿಯ ಪತಿಯೇ ಮುಂದೆ ನಿಂತು ತುಂಗ ಹಾಗೂ ಭದ್ರಾ ನದಿಗಳಿಂದ ಅಕ್ರಮವಾಗಿ ಮರಳು ತೆಗೆಸುತ್ತಿದ್ದಾರೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಯೇ ಬೆಂಬಲವಾಗಿ ನಿಂತಿದ್ದಾರೆ ಎನ್ನುತ್ತಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಆಗೊಮ್ಮೆ–ಈಗೊಮ್ಮೆ ನೆಪಕ್ಕೆ ಎಂಬಂತೆ ಪೊಲೀಸರೊಂದಿಗೆ ತೆರಳಿ ದಾಳಿ ಮಾಡುತ್ತಾರೆ. ಆ ವೇಳೆ ಮರಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಯಾರೂ ಅವರ ಕೈಗೆ ಸಿಗುವುದಿಲ್ಲ. ಬದಲಿಗೆ ಅಲ್ಲಿ ಸಂಗ್ರಹಿಸಿಟ್ಟ ಒಂದಷ್ಟು ಮರಳು ಮುಟ್ಟುಗೋಲು ಹಾಕಿಕೊಂಡು ಫೋಟೊ ತೆಗೆಸಿ ಮಾಧ್ಯಮಗಳಿಗೆ ಕೊಡುತ್ತಾರೆ. ಮರಳು ಗಣಿಗಾರಿಕೆಗೆ ಬಳಸಿದ ಜೆಸಿಬಿ, ವಾಹನ ವಶಕ್ಕೆ ಪಡೆದರೂ ಕೆಲ ದಿನಗಳಲ್ಲೇ ನಿಗದಿತ ದಂಡ ಕಟ್ಟಿ ಬಿಡಿಸಿಕೊಂಡು ಬರಲಾಗುತ್ತದೆ. ಮತ್ತೆ ಅಕ್ರಮ ವಹಿವಾಟು ಯಥಾ ಸ್ಥಿತಿಯಲ್ಲಿ ಮುಂದುವರೆಯುತ್ತದೆ. ಅಧಿಕಾರಿಗಳ ದಾಳಿಯೂ ಇಲ್ಲಿ ಕಣ್ಣೊರೆಸುವ ತಂತ್ರ ಎಂದು ಸ್ಥಳೀಯರು ದೂರುತ್ತಾರೆ.

ತುಂಗ ಹಾಗೂ ಭದ್ರಾ ನದಿಗಳ ಆಳ ಪ್ರದೇಶದಲ್ಲಿ ಹೆಚ್ಚು ಮರಳು ಸಂಗ್ರಹವಿದೆ. ಉತ್ತರ ಭಾರತದ ರಾಜ್ಯಗಳು ಇಲ್ಲವೇ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದ ಮಂಗಳೂರಿನಿಂದ ಮುಳುಗು ತಜ್ಞರನ್ನು ಕರೆತಂದು ಮರಳು ಅಕ್ರಮ ಗಣಿಗಾರಿಕೆಗೆ ಬಳಸಿಕೊಳ್ಳಲಾಗುತ್ತದೆ. ಅವರು ನೀರಿನಲ್ಲಿ ಮುಳುಗಿ ಮರಳು ಮೇಲೆತ್ತಿ ತಂದು ಉಕ್ಕಡದಲ್ಲಿ ತುಂಬಿ ದಂಡೆಗೆ ತರುತ್ತಾರೆ. ಆ ಕಾರ್ಮಿಕರಿಗೆ ವಾಸ್ತವ್ಯಕ್ಕೆ ಕೊಠಡಿ, ಊಟೋಪಚಾರದ ವ್ಯವಸ್ಥೆ ಸಮೀಪದಲ್ಲೇ ಮಾಡಲಾಗುತ್ತಿದೆ.

ಮರಳು ಸಾಗಣೆಗೆ ನದಿಯ ದಂಡೆಯಿಂದ ಮುಖ್ಯ ರಸ್ತೆಗಳಿಗೆ ಕೆಲವು ಕಡೆ ಅಕ್ರಮವಾಗಿಯೇ ರಸ್ತೆ ಮಾಡಿಕೊಂಡಿದ್ದಾರೆ. ಹೊಲದ ಮಾಲೀಕರಿಗೂ ಮಾಸಿಕ ಬಾಡಿಗೆ ಕೊಡುತ್ತಿದ್ದಾರೆ. ನದಿ ದಂಡೆಯ ಕೆಲವು ಗ್ರಾಮಗಳಲ್ಲಿ ದೇವಸ್ಥಾನ ಸಮಿತಿಗೆ ಹಣ ನಿಗದಿ ಮಾಡಿದ್ದು, ಆ ಹಣ ಪಾವತಿಸಿ ಮರಳು ಸಾಗಣೆ ಮಾಡಲಾಗುತ್ತಿದೆ. ಇದು ಅಕ್ರಮ ವಹಿವಾಟಿಗೆ ಪ್ರತಿರೋಧವೇ ಇಲ್ಲದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.