ತ್ಯಾಗರ್ತಿ: ತ್ಯಾಗರ್ತಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಮಿಂಚು, ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.

ವಾರದಿಂದ ಬಿಸಿಲಿನ ಧಗೆಯಿಂದ ಬಳಲಿದ್ದ ಜನರಿಗೆ ಈ ಮಳೆಯು ತಂಪೆರೆಯಿತು. ಹೀಗಾಗಿ ಮುಂಗಾರು ಪ್ರಾರಂಭಕ್ಕೂ ಮುನ್ನವೇ ರೈತರು ಹೊಲ ಗದ್ದೆಗಳನ್ನು ಹಸನುಗೊಳಿಸಲು ಮುಂದಾಗಿದ್ದಾರೆ.

ತ್ಯಾಗರ್ತಿ ಗ್ರಾಮದ ಕೋಟಿ ಪರಶುರಾಮ ಅವರ ಹಸು ಸೋಮವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದೆ.

ಆನವಟ್ಟಿ: ಸೋಮವಾರ ಸಂಜೆ 4.30ರ ಸುಮಾರಿಗೆ ಆನವಟ್ಟಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಶುರುವಾದ ಭಾರಿ ಬಿರುಗಾಳಿ ಸಹಿತ ಮಳೆಗೆ ಮನೆಗಳ ಹಂಚು, ತಗಡಿನ ಶೆಡ್ಗಳು ಹಾರಿಹೋಗಿವೆ. ಕೆಲವು ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿದ್ದು ಸಾಕಷ್ಟು ನಷ್ಟ ಉಂಟಾಗಿದೆ.

ಆನವಟ್ಟಿಯ ತಿಮ್ಮಾಪುರ ಬಡಾವಣೆಯ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿ, ಅರಣ್ಯ ಇಲಾಖೆ ಎದುರು, ಕೆಪಿಎಸ್ ಶಾಲೆ ಎದುರು, ಪ್ರಮುಖ ಬೀದಿಗಳ ವಿದ್ಯುತ್ ತಂತಿಗಳ ಮೇಲೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯುತ್ ಲೈನ್ಗಳ ಮೇಲಿನ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಕೆಇಬಿ ಲೈನ್ಮನ್ಗಳು ನಿರತರಾಗಿದ್ದರು.

ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಭಾರಿ ಬಿರುಗಾಳಿ ಮಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-42-1583037293

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.