ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರು ನೀರಾನೆ ದಾಳಿಗೆ ಸಿಲುಕಿ ಮೃತಪಟ್ಟ ಬೆನ್ನಲ್ಲೇ ಶನಿವಾರ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗನಾಥ ಹಾಡ್ಯ ಧಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

‘ಇದೊಂದು ದುರ್ಘಟನೆ. ಮೃತರ ಕುಟುಂಬದ ದುಃಖ ಭರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಮೃಗಾಲಯದ ವೈದ್ಯೆ ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಉಂಟಾಗಿದ್ದು ದುಃಖ ತಂದಿದೆ’ ಎಂದು ಅವರು ಈ ಸಂದರ್ಭ ಬೇಸರ ವ್ಯಕ್ತಪಡಿಸಿದರು.

‘ಘಟನೆ ಕುರಿತು ಪೊಲೀಸ್ ಹಾಗೂ ಅರಣ್ಯ ಇಲಾಖೆ ತನಿಖೆ ಆರಂಭಿಸಿವೆ. ಇತ್ತೀಚೆಗೆ ಕೆಲಸಕ್ಕೆ ಸೇರಿದ್ದ ಡಾ. ಸಮೀಕ್ಷಾ ರೆಡ್ಡಿ ಮೃಗಾಲಯದಲ್ಲಿರುವ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದರು. ಆ ಪ್ರೀತಿಯೇ ಅವರ ಪ್ರಾಣಕ್ಕೆ ಕುಂದು ತಂದಿರುವುದು ನೋವು ತಂದಿದೆ. ತಪ್ಪಿತಸ್ಥರು ಯಾರೇ ಆದರೂ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಇಬ್ಬರು ಸಿಬ್ಬಂದಿಯೊಂದಿಗೆ ಬಂದಿದ್ದ ಸಮೀಕ್ಷಾ ರೆಡ್ಡಿ ನೀರಾನೆಯ ಚಿಕಿತ್ಸೆಗೆ ಮುಂದಾಗಿದ್ದರು. ಅವರು ನೀರಾನೆ ಬಳಿ ಹೋದಾಗ, ಗರ್ಭಿಣಿ ನೀರಾನೆ ಹಂಸಿಣಿ ಸಿಟ್ಟಿಗೆದ್ದಿದೆ. ಹೆರಿಗೆ ದಿನ ಹತ್ತಿರಕ್ಕೆ ಬಂದಾಗ ಅದು ಊಟ ತಿಂಡಿ ಬಿಟ್ಟಿರುತ್ತದೆ. ಈ ವೇಳೆ ಸಮೀಕ್ಷಾ ರೆಡ್ಡಿ ಅವರನ್ನು ನೋಡಿ, ರೊಚ್ಚಿಗೆದ್ದಿದೆ. ಅದರಿಂದ ತಪ್ಪಿಸಿಕೊಳ್ಳಲು ಹೋಗಿದ್ದ ವೈದ್ಯೆ ಏಣಿಯಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಆಗ ಅವರನ್ನು ಕಚ್ಚಿದ್ದರಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

‘ಮೃಗಾಲಯದಲ್ಲಿ ಪಶು ವೈದ್ಯರ ಕೊರತೆ ಇದೆ. ಹಿಂದಿನ ವೈದ್ಯಾಧಿಕಾರಿ ಮುರುಳಿ ಮನೋಹರ್ ರಾಜೀನಾಮೆ ನೀಡಿ 4 ತಿಂಗಳು ಕಳೆದಿದೆ. ಇದುವರೆಗೂ ಹೊಸ ವೈದ್ಯಾಧಿಕಾರಿ ನೇಮಕ ಮಾಡಿಕೊಂಡಿಲ್ಲ. ಈ ವಿಚಾರ ನನ್ನ ಗಮನಕ್ಕೆ ಈಗ ಬಂದಿದ್ದು, ಸರ್ಕಾರ ಅರಣ್ಯ ಇಲಾಖೆಯ ಸಮಿತಿ ರಚಿಸಿದೆ. 7 ದಿನಗಳೊಳಗೆ ವರದಿ ನೀಡಬೇಕಿದೆ. ಅಲ್ಲದೆ, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-42-890672500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.