ಸೋಮವಾರ, ಆಗಸ್ಟ್ 15, 2022
20 °C

ನಿಷೇಧಾಜ್ಞೆ ಮುಂದುವರಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ, ಉಳಿದೆಡೆ ನಿಷೇಧಾಜ್ಞೆ ಮುಂದುವರಿಸಿದ ಕಾರಣ ವ್ಯಾಪಾರ ವಹಿವಾಟಿಗೆ, ವರ್ತಕರಿಗೆ ತೊಂದರೆಯಾಗಿದೆ ಎಂದು ಆಗ್ರಹಿಸಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ನಡೆದ ಸಣ್ಣ ಘಟನೆ ಕಾರಣ 8 ದಿನಗಳಿಂದ ಸಾರ್ವಜನಿಕರು, ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕೋವಿಡ್‌ನಿಂದ ವಾಣಿಜ್ಯ ವಹಿವಾಟುಗಳು ಬಂದ್ ಆಗಿವೆ. ಉದ್ಯಮಿದಾರರು ತೊಂದರೆಗೊಳಗಾಗಿದ್ದಾರೆ. ಈ ಮಧ್ಯೆ ನಿಷೇಧಾಜ್ಞೆ ವಾರವಾದರೂ ಮುಂದುವಿಸುತ್ತಿರುವುದು ಸರಿಯಲ್ಲ ಎಂದರು.

ಪೊಲೀಸ್ ಇಲಾಖೆ ರಕ್ಷಣಾ ಕ್ರಮ ಬಿಗಿಗೊಳಿಸಬೇಕು. ನಿಷೇಧಾಜ್ಞೆ, ಕರ್ಫ್ಯೂ ವಾಪಸ್ ಪಡೆಯಬೇಕು. ವಾಣಿಜೋದ್ಯಮಿಗಳಿಗೆ ರಕ್ಷಣೆ ನೀಡಬೇಕು. ಉದ್ಯಮಿಗಳ ಜತೆ ಕೆಲವು ಪೊಲಿಸರು ನಡೆಸುತ್ತಿರುವ ದಬ್ಬಾಳಿಕೆ ತಡೆಯಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಮುಖಂಡರಾದ ಕೆ.ವಿ,ವಸಂತ್ ಕುಮಾರ್, ಅಶ್ವಥ್ ನಾರಾಯಣ ಶೆಟ್ಟಿ, ಉದಯಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು