ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ಮಕ್ಕಳನ್ನು ಮನೆಗೆ ಕರೆದೊಯ್ದ ಪೋಷಕರು

Last Updated 31 ಡಿಸೆಂಬರ್ 2021, 7:27 IST
ಅಕ್ಷರ ಗಾತ್ರ

ಹೊಸನಗರ: ತಾಲೂಕಿನ ಹಿಲ್ಕುಂಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಂಡು ಬಂದಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ನಡೆಸಲು ಪೋಷಕರು ಮುಂದಾಗಿದ್ದಾರೆ.

ಸದರಿ ಶಾಲೆಯಲ್ಲಿ ಒಂದರಿಂದ 5ನೇ ತರಗತಿಯವರೆಗೆ 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಕೇವಲ ಒಬ್ಬ ಶಿಕ್ಷಕಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಏಕ ಶಿಕ್ಷಕಿಯಿಂದ ಅಷ್ಟು ಮಕ್ಕಳಿಗೆ ತರಗತಿ ನಡೆಸುವುದು ಕಷ್ಟವಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ದೂರಿದ್ದಾರೆ.

ಇಬ್ಬರು ಕಾಯಂ ಶಿಕ್ಷಕರು: ‘ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರ ಪೋಸ್ಟ್ ಇದೆ. ಆದರೆ ಒಬ್ಬ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಎರಡು ಕಾಯಂ ಶಿಕ್ಷಕರು ಇರುವ ಕಾರಣ ಅತಿಥಿ ಶಿಕ್ಷಕರ ಸದುಪಯೋಗವನ್ನು ಪಡೆದುಕೊಳ್ಳುವಂತಿಲ್ಲ. ನಮ್ಮ ಶಿಕ್ಷಕರನ್ನು ನಮಗೆ ಕೊಡಿ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಆಗ್ರಹಿಸಿದ್ದಾರೆ.

ಬಿಇಒ ಕಚೇರಿಗೆ ಬಂದ ಪೋಷಕರು: ‘ಎಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಬಿಇಒ ಕಚೇರಿಗೆ ಭೇಟಿ ನೀಡಿದ 18 ವಿದ್ಯಾರ್ಥಿಗಳ ಪೋಷಕರು ಶಿಕ್ಷಕರ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಆದರೆ ಬೇರೆಡೆ ತೆರಳಿದ ಕಾರಣ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಅಸಮಧಾನಗೊಂಡ ಪೋಷಕರು ನಾಳೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಶಿಕ್ಷಕರ ಕೊರತೆ ನೀಗುವ ತನಕ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ಎಚ್ಚರಿಸಿ ವಾಪಸ್ಸಾಗಿದ್ದಾರೆ.

ಮಧ್ಯಾಹ್ನದ ವೇಳೆ ಪೋಷಕರು ಶಾಲೆಗೆ ವಾಪಸ್ಸಾಗುತ್ತಿದ್ದಂತೆ ಮಕ್ಕಳನ್ನು ಕರೆದುಕೊಂಡು ಮನೆಗೆ ತೆರಳಿದರು. ಇದರಿಂದಾಗಿ ಇಡೀ ದಿನ ಶಾಲೆಯಲ್ಲಿ ಶಿಕ್ಷಕಿಯೊಬ್ಬರೇ ಇರುವಂತಾಯಿತು. ಪ್ರತಿಭಟನೆಯಲ್ಲಿಪ್ರಮುಖರಾದ ಷಣ್ಮುಕಪ್ಪ, ಗಣೇಶ್, ರಾಘು ಹಿಲ್ಕುಂಜಿ, ಸುದೀಪ್, ರೇಣುಕಾ ದೇವೇಂದ್ರಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT