ಭಾನುವಾರ, ಮೇ 9, 2021
27 °C

ಶಟಲ್‌ ಬ್ಯಾಡ್ಮಿಂಟನ್‌ಗೆ ಚಾಲನೆ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದ ಸಿಟಿಕ್ಲಬ್‌ನಲ್ಲಿ ವೀರಶೈವ ಯುವ ಸಂಗಮ ಯುಗಾದಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಟಲ್‌ ಬ್ಯಾಡ್ಮಿಂಟನ್‌, ಕೇರಂ ಪಂದ್ಯಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ‘ಸೂಡಾ’ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯ ಎಚ್‌.ಸಿ. ಯೋಗೀಶ್ ಭಾನುವಾರ ಚಾಲನೆ ನೀಡಿದರು.

ಜ್ಯೋತಿ ಪ್ರಕಾಶ್ ಮಾತನಾಡಿ, ‘ಪಂದ್ಯದಲ್ಲಿ ಭಾಗವಹಿಸುವುದು ಮುಖ್ಯ. ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಸೋತರೆ ನಿರಾಶರಾಗಬಾರದು. ಸೋಲು, ಗೆಲುವುಗಳ ಬಗ್ಗೆ ಸಮ ಚಿತ್ತದಿಂದ ಇರಬೇಕು’ ಎಂದರು.

ಏ.14ರಂದು ಸಾಗರ ರಸ್ತೆಯ ಪೆಸಿಟ್ ಕಾಲೇಜು ಕ್ರೀಡಾ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಗಳು ಬೆಳಿಗ್ಗೆ 8ಕ್ಕೆ ನಡೆಯಲಿವೆ. ಕ್ರಿಕೆಟ್‌ನಲ್ಲಿ ಭಾಗವಹಿಸುವ ತಂಡಗಳು ಏ.12ರ ಸಂಜೆ 5ರ ಒಳಗೆ ಹೆಸರು ನೋಂದಾ
ಯಿಸಬಹುದು ಎಂದು ಸಿ.ಅರುಣ್ (9449329155), ಸುರೇಶ್ (9448139228) ತಿಳಿಸಿದರು.

18ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ, ಜಿಲ್ಲೆಯ ವೀರಶೈವ ಲಿಂಗಾಯತ ನೋಂದಾಯಿತ ಸಂಘ-ಸಂಸ್ಥೆಗಳ ಆಯ್ದ ಪದಾಧಿಕಾರಿಗಳಿಗೆ ಹಾಗೂ ಕೊರೋನಾ ವಾರಿಯರ್‌ಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೀರಶೈವ ಯುವ ಸಂಗಮ ಕಾರ್ಯದರ್ಶಿ ಸುರೇಶಪ್ಪ ಎಂ.ಆರ್.‌ ಮಾಹಿತಿ ನೀಡಿದರು.

ಸಿಟಿ ಕ್ಲಬ್‌ ಗೌರವ ಕಾರ್ಯದರ್ಶಿ ಎಚ್‌.ಜೆ. ವಿಜಯಕುಮಾರ್, ಜಂಗಲ್‌ ರೆಸಾರ್ಟ್‌ ನಿಗಮದ ನಿರ್ದೇಶಕ ರಾಜೇಶ್ ಕಾಮತ್‌, ಪಾಲಿಕೆ ಸದಸ್ಯ ಇ. ವಿಶ್ವಾಸ್, ಎಪಿಎಂಸಿ ಸದಸ್ಯ ಅರಣ್ ಬಾಬು, ಪತ್ರಕರ್ತ ವೈ.ಕೆ. ಸೂರ್ಯನಾರಾಯಣ, ಸತೀಶ್ ಗಾಂಧಿ, ಗಣೇಶ್ ಎಂ. ಅಂಗಡಿ, ದಿವಾಕರ ಶೆಟ್ಟಿ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು