ಸಾಗರ: ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನದ ಅಂಗವಾಗಿ ಮೇ 13ರಂದು ಸಿಗಂದೂರಿನ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹೃದಯ ರೋಗ ತಪಾಸಣೆ ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅನಾಥಾಶ್ರಮಗಳಿಗೆ ಸಾಮಗ್ರಿ ವಿತರಣೆ, ಬೇರಾಳ ಸರ್ಕಾರಿ ಶಾಲೆಗೆ ‘ಸಿಗಂದೂರಿನ ಚಿತ್ತ ಸರ್ಕಾರಿ ಶಾಲೆಯತ್ತ’ ಯೋಜನೆಯಡಿ ಬಣ್ಣ ದರ್ಪಣ, ರಕ್ತದಾನ ಶಿಬಿರ, ಶ್ರವಣ ತಪಾಸಣೆ, ಸಾಧನ ಸಲಕರಣೆ ವಿತರಣೆ, ಸಾಗರ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ರಾಮಪ್ಪ ಅವರ ಅಭಿಮಾನಿ ಬಳಗದ ಪ್ರಮುಖರಾದ ವಿಜಯಕುಮಾರ್ ಹೆರಬೆಟ್ಟು ತಿಳಿಸಿದರು.

ಆನಂದಪುರದ ಮಲ್ನಾಡ್ ಸೋಲ್ಜರ್ ಕೋಚಿಂಗ್ ಸೆಂಟರ್, ಯೋಧ ನಮನ ಬಳಗದ ಸಹಯೋಗದೊಂದಿಗೆ ಅಗ್ನಿವೀರ್ ಪಡೆಗೆ ಸೇರ್ಪಡೆಯಾಗುವ ಆಕಾಂಕ್ಷಿಗಳಿಗೆ ತರಬೇತಿ ಶಿಬಿರವನ್ನು ಸಿಗಂದೂರು ಚೌಡಮ್ಮ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ದೇವರಾಜ ಕಪ್ಪದೂರು, ಚೇತನ್ ರಾಜ್ ಕಣ್ಣೂರು, ರವಿ ಅಳೂರು, ಗಣೇಶ್ ಜಾಕಿ, ರವಿ ಹುರುಳಿ, ಉಮೇಶ್ ಹೆಸಿಗೆ, ಗಿರೀಶ್ ಕೋವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-42-1986779046

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.