ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸ್ತಿಕರಿಗೂ ಇಷ್ಟವಾಗುವ ಭೈರಪ್ಪನವರ ಪರ್ವ: ಡಾ.ಗಂಗಾಧರ್

ಬಹುಮುಖಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ವೈದ್ಯ ಡಾ.ಗಂಗಾಧರ್ ಅಭಿಮತ
Last Updated 13 ಮೇ 2022, 2:22 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಪರ್ವ ನಾಟಕ ನಾಸ್ತಿಕರಿಗೂ ಇಷ್ಟವಾದುದು ಎಂದು ಡಾ.ಗಂಗಾಧರ್ ಹೇಳಿದರು.

ನಗರದ ಕಮಲ ನೆಹರೂ ಕಾಲೇಜಿನಲ್ಲಿ ಗುರುವಾರ ಪರ್ವ ನಾಟಕದ ಕುರಿತು ಬಹುಮುಖಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭೈರಪ್ಪ ಅವರು ಮೂಲ ಮಹಾಭಾರತದ ಹಲವು ದೃಶ್ಯಗಳನ್ನು ಈ ನಾಟಕದಲ್ಲಿ ಬದಲಾವಣೆ ಮಾಡಿದ್ದಾರೆ. ಕೌರವರು ನೂರು ಜನರ ಬದಲು 14 ಜನಮಾತ್ರ. ಹಾಗೇ ಏಕಲವ್ಯನ ಬೆರಳು ಕತ್ತರಿಸಲು ಕಾರಣವಾಗಿದ್ದು ಭೀಷ್ಮ ಹೊರತು ಅರ್ಜುನನಲ್ಲ. ಸಂಜಯ ವಿದೂಷಕನ ರೀತಿ ಚಿತ್ರಿಸಲ್ಪಟ್ಟಿದ್ದು ಬೇಸರದ ಸಂಗತಿ ಎಂದರು.

ಬೈರಪ್ಪ ಅಲ್ಲದೇ ಈ ಕಾದಂಬರಿ ಬೇರೆಯವರು ಬರೆದಿದ್ದರೆ ವಿವಾದಕ್ಕೆ ಆಸ್ಪದವಾಗುವ ಸಾಧ್ಯತೆ ಇತ್ತು. ನಾಟಕದಲ್ಲಿ ಕೆಲವು ಅನಗತ್ಯ ದೃಶ್ಯಗಳು ಇವೆ. ಇದರಿಂದ ದೃಶ್ಯದಿಂದ ದೃಶ್ಯಕ್ಕೆ ಸಂಭಾಷಣೆ ಪೂರ್ತಿಯಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ, ಕಾದಂಬರಿಯ ಮಾತುಗಳಲ್ಲೇ ಪೂರ್ಣವಾಗಿ ನಾಟಕದ ಸಂಭಾಷಣೆ ಇರುವುದು ಸಂತೋಷದ ವಿಷಯ ಎಂದರು.

ನೃತ್ಯ ಕಲಾವಿದೆ ಸಹನಾ ಚೇತನ್ ಮಾತನಾಡಿ, ‘ಕುಂತಿ, ದುರ್ಯೋಧನ, ಭೀಮನ ಪಾತ್ರಗಳನ್ನು ಕಲಾವಿದರು ಬಹಳ ಹುರುಪಿನಿಂದ ಅಭಿನಯಿಸಿದರು. ನಾಟಕದ ಮೂರನೇ ಭಾಗದಲ್ಲಿ ಶುಕಮುನಿ, ಭೀಷ್ಮ, ದ್ರೋಣರ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು. ಸಂಭಾಷಣೆ ಸ್ವಲ್ಪ ಮಟ್ಟಿಗೆ ಪ್ರೇಕ್ಷಕರಿಗೆ ಕಿರಿಕಿರಿ ತರುವಂತಿತ್ತು. ನಾಟಕದಲ್ಲಿ ನಿಯೋಗ ಪದ್ಧತಿ ಹೇಳುವಾಗ ವಂಶಾಭಿವೃದ್ಧಿಗೆ ಮಾನ್ಯತೆ ಇತ್ತು. ಆ ಮೂಲಕ ನಾಟಕದಲ್ಲಿ ಹೆಣ್ಣನ್ನು ಕಡೆಗಣಿಸಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸೂತ ಪುತ್ರದಲ್ಲಿನ ಸೂತ ಎಂಬ ಪದ ಜಾತೀಯತೆಯ ವೈಭವೀಕರಣ ಮಾಡುತ್ತಿತ್ತು. ಇದು ಬೇಸರದ ಸಂಗತಿ. ರಣಾಂಗಣದ ದೃಶ್ಯ, ಸಂಗೀತ ಅದ್ಭುತವಾಗಿ ಮೂಡಿಬಂತು. ಒಟ್ಟಿನಲ್ಲಿ ನಾಟಕ ಎಲ್ಲಿಯೂ ವಿಫಲ ಹೊಂದದೆ ಸಫಲವಾಗಿದೆ ಎಂದರು.

ರಂಗ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಅಧ್ಯಕ್ಷತೆ ವಹಿಸಿದ್ದರು. ಕಮಲಾ ನೆಹರೂ ಕಾಲೇಜಿನ ಪ್ರಾಂಶುಪಾಲ ಡಾ.ನಾಗಭೂಷಣ ಮಾತನಾಡಿದರು. ನಂತರ ಪರ್ವ ನಾಟಕಸಿದ್ಧತೆ ಕುರಿತ ವಿಡಿಯೊ ಪ್ರದರ್ಶಿಸಲಾಯಿತು.

ಚರ್ಚೆಯಲ್ಲಿ ರಂಗಕರ್ಮಿಗಳಾದ ಗೌರಿಶಂಕರ್ ಕೊಟ್ರಪ್ಪ ಹಿರೇ ಮಾಗಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT