ಸಾಗರ: ಸಾಗರ-ಸಿಗಂದೂರು ರಸ್ತೆಯ ಖಾಸಗಿ ಲೇ ಔಟ್‌ನಲ್ಲಿ ಅಪರೂಪದ ತಳಿಯ ಕಾಡುಪಾಪ ಶನಿವಾರ ಕಾಣಿಸಿಕೊಂಡಿದೆ.
ಲೇ ಔಟ್‌ನ ಬೇಲಿಯ ನಡುವೆ ಕಾಣಿಸಿಕೊಂಡ ಈ ಕಾಡುಪಾಪವನ್ನು ಇಂಗ್ಲಿಷ್‌ನಲ್ಲಿ ಸ್ಲೆಂಡರ್ ಲೋರಿಸ್ ಎಂದು ಕರೆಯುತ್ತಾರೆ. ನಿಧಾನವಾಗಿ ಸಾಗುವ, ಓಡಲು, ಹಾರಲು ಬಾರದ ಸೌಮ್ಯ ಸ್ವಭಾವದ ಪ್ರಾಣಿ ಎಂದು ಗುರುತಿಸಲಾಗಿದೆ.
ಕಾಗೆಯ ದಾಳಿ ಮಾಡಿದರೆ ಅದಕ್ಕೆ ತೊಂದರೆಯಾಗಬಹುದು ಎಂದು ಸ್ಥಳೀಯರು ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿಯವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಖಿಲೇಶ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ಸಮೀಪದ ಕಾಡಿಗೆ ಅದನ್ನು ಬಿಡುವ ವ್ಯವಸ್ಥೆ ಮಾಡಿದರು.
‘ಈ ತಳಿಯ ಕಾಡುಪಾಪ ರಾತ್ರಿ ವೇಳೆ ಮಿಡತೆ, ಚಿಟ್ಟೆಗಳನ್ನು ತಿಂದು ಬದುಕುತ್ತದೆ. ಹಗಲಿನಲ್ಲಿ ಇದಕ್ಕೆ ಕಣ್ಣು ಕಾಣಿಸುವುದಿಲ್ಲ. ದಟ್ಟ ಕಾಡಿನಲ್ಲಿ ವಾಸಿಸುವ ಈ ಪ್ರಾಣಿ ಪೇಟೆಯ ಸಮೀಪ ಬಂದಿರುವುದು ಆಶ್ಚರ್ಯ ತಂದಿದೆ’ ಎಂದು ಅಖಿಲೇಶ್ ಚಿಪ್ಪಳಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.