ಸೊರಬ: ‘ರಥವು ನಮ್ಮೂರಿನ ಅಸ್ಮಿತೆ ಹಾಗೂ ಸಾವಿರಾರು ಭಕ್ತರ ನಂಬಿಕೆಯ ಸಂಕೇತ. ಈ ಭವ್ಯ ರಥದ ಪ್ರತಿಯೊಂದು ಕೆತ್ತನೆಯಲ್ಲೂ ಶಿಲ್ಪಿಗಳ ಬೆವರು, ಭಕ್ತರ ಅಚಲವಾದ ನಂಬಿಕೆ ಅಡಗಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗನಾಥ ದೇವಾಲಯದ ಮುಂಭಾಗ ಸೋಮವಾರ ಕಂದಾಯ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ನೂತನ ರಥ ನಿರ್ಮಾಣ ಸಮರ್ಪಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮಿರಂಗನಾಥ ದೇವರ ನೂತನ ಬ್ರಹ್ಮರಥ ಸಮರ್ಪಣಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಸಾಂಸ್ಕೃತಿಕವಾಗಿ ಕಲೆ, ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಿರುವ ನನ್ನ ಕ್ಷೇತ್ರಕ್ಕೆ ನೂತನ ರಥ ಸಮರ್ಪಿಸಿರುವುದು ಸಂತಸ ನೀಡಿದೆ. ರಥ ಊರಿನ ಕೀರ್ತಿ ಇದ್ದಂತೆ. ಈ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ರಥ ನಿರ್ಮಾಣ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದೆ. ಸರ್ಕಾರ ಸೇರಿದಂತೆ ದಾನಿಗಳ ಸಹಕಾರದಿಂದ ಇದನ್ನು ನಿರ್ಮಿಸಿ ದೇವಾಲಯಕ್ಕೆ ಸಮರ್ಪಿಸಲಾಗಿದೆ. ತೇರು ಮನೆ ನಿರ್ಮಾಣಕ್ಕೆ ₹ 10 ಲಕ್ಷ ಮಂಜೂರಾಗಿದ್ದು, ಒಟ್ಟು ₹30 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು’ ಎಂದರು.

‘ಕಾನೂನು ಪರಿಪಾಲನೆ ಪ್ರತಿಯೊಬ್ಬರ ಕರ್ತವ್ಯ. ಈಗಾಗಲೇ ಪೊಲೀಸ್ ಇಲಾಖೆಯ 3 ವಾಹನ, ಅಗ್ನಿಶಾಮಕ ದಳದ 2 ವಾಹನ ಹಾಗೂ ಪಶು ಇಲಾಖೆಯ ಒಂದು ನೂತನ ವಾಹನಕ್ಕೆ ಚಾಲನೆ ನೀಡಲಾಗಿದೆ. ಪೊಲೀಸ್ ಇಲಾಖೆಯ ಎರಡು ವಾಹನಗಳನ್ನು ಶಾಸಕರ ಅನುದಾನದಲ್ಲಿ, ಇನ್ನುಳಿದ ವಾಹನಗಳು ಇಲಾಖಾ ಅನುದಾನದಲ್ಲಿ ನೀಡಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ಗ್ಯಾರಂಟಿ ಯೋಜನೆಯಡಿ ತಾಲ್ಲೂಕಿನಲ್ಲಿ ₹ 400 ಕೋಟಿ ಮೊತ್ತ ಜಮಾ ಮಾಡಲಾಗಿದೆ. ತಾಲ್ಲೂಕಿನಲ್ಲಿ 162 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಕ್ಷೇತ್ರದಲ್ಲಿ ರಸ್ತೆ ಹಾಗೂ ಶಾಲಾ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ದೇವಾಲಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಚಿವರ ಪತ್ನಿ ಅನಿತಾ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಕವಳಕಟ್ಟಿ, ತಹಶೀಲ್ದಾರ್ ಪುರಂದರ್ ಕೆ., ತಾ.ಪಂ ಇಒ ಶಶಿಧರ್, ತಾ.ಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಆಶ್ರಯ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಪುರೋಹಿತರಾದ ನಾರಾಯಣ ಭಟ್, ಪಾಣಿ ಡಾಕಪ್ಪ, ಪುರಸಭೆ ಮುಖ್ಯಾಧಿಕಾರಿ ಚಂದನ್, ಡಿವೈಎಸ್ಪಿ ಕೇಶವ್, ಬಂದಿಗೆ ಬಸವರಾಜ್, ತಬಲಿ ಬಂಗಾರಪ್ಪ, ಶ್ರೀರಂಜಿನಿ, ಎಂ.ಡಿ.ಉಮೇಶ್, ದಿವಾಕರ್ ಬಾವೆ, ಶಿವಾನಂದ ಬಿಳಗಿ, ಶಿವಯೋಗಿ, ಷಣ್ಮುಖಾಚಾರ್, ವೀರೇಶ್ ಗೌಡ, ಅಣ್ಣಪ್ಪ ತಾರಘಟ್ಟ, ಪತ್ರಕರ್ತರ ಸಂಘದ ಅಧ್ಯಕ್ಷ ತೋಟಪ್ಪ, ಸದಾಗೌಡ, ಗುರುಮೂರ್ತಿ, ಸಣ್ಣಬೈಲ್ ಪರಶುರಾಮ್ ಸೇರಿದಂತೆ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-42-1010072942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.