ಸೊರಬ: ‘ಕನ್ನಡ ಸಾಹಿತ್ಯ ಪರಿಷತ್ ಭವನದ ನೂತನ ಕಟ್ಟಡದ ಲೋಕಾರ್ಪಣೆ ಏ. 6ರಂದು ನಡೆಯಲಿದೆ. ಅದೇ ದಿನ ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನ ಜರುಗಲಿದೆ’ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಏ.6ರಂದು ಬೆಳಿಗ್ಗೆ 7.45ಕ್ಕೆ ನೂತನ ಕನ್ನಡ ಭವನ ಲೋಕಾರ್ಪಣೆ ನಡೆಯಲಿದ್ದು, ತಹಶೀಲ್ದಾರ್ ಪುರಂದರ ಕೆ. ಅವರಿಂದ ರಾಷ್ಟ್ರಧ್ವಜ, ತಾ.ಪಂ. ಇಒ ಶಶಿಧರ್ ಕೆ.ಜಿ ಅವರಿಂದ ನಾಡಧ್ವಜ ಹಾಗೂ ಷಣ್ಮುಖಾಚಾರ್ ಎನ್. ಅವರಿಂದ ಕನ್ನಡ ಧ್ವಜಾರೋಹಣ ನಡೆಯಲಿದೆ’ ಎಂದರು.

‘ಬೆಳಿಗ್ಗೆ 8.45ಕ್ಕೆ ರಂಗನಾಥ ಸ್ವಾಮಿ ದೇವಸ್ಥಾನದಿಂದ ನೂತನ ಕನ್ನಡ ಭವನದವರೆಗೆ ವಿವಿಧ ವಾದ್ಯ ಮೇಳ, ಜಾನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಅವರ ಮೆರವಣಿಗೆ ನಡೆಯಲಿದ್ದು, ಸಚಿವ ಮಧು ಬಂಗಾರಪ್ಪ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ 11ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸುರಭಿ ಮಹಿಳಾ ಯಕ್ಷ ಬಳಗದ ವತಿಯಿಂದ ಯಕ್ಷಗಾನ ನೃತ್ಯ, ಸಚಿವರಿಂದ ಕನ್ನಡ ಭವನ ಲೋಕಾರ್ಪಣೆ ಹಾಗೂ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಶಾಸಕರಾದ ಬಿ.ಕೆ.ಸಂಗಮೇಶ್ವರ, ಗೋಪಾಲಕೃಷ್ಣ ಬೇಳೂರು ಅವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಲ್ಕಿಶ್ ಬಾನು, ಎಸ್ಸಿ-ಎಸ್ಟಿ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಂಶುಮಂತ್, ಸಿ.ಎಸ್. ಚಂದ್ರಭೂಪಾಲ್, ಎಚ್.ಕೆ ಜಯಶೀಲಗೌಡ ಉಪಸ್ಥಿತರಿರುವರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಾಚಾರ್ ಎನ್., ರಾಜಪ್ಪ ಮಾಸ್ತರ್, ಶಿವಾನಂದ ಬಿಳಗಿ, ಎಸ್.ಆರ್. ಕುಮಾರಸ್ವಾಮಿ, ಸಣ್ಣಬೈಲ್ ಪರಶುರಾಮ, ವೀಣಾ ಟೇಮ್ಮರ್, ರೇವಣಪ್ಪ ಬಿದರಗೇರಿ, ಶಂಕರ್ಶೇಟ್, ಎಚ್.ಗುರುಮೂರ್ತಿ, ಮಧುರಾಯ್ ಶೇಟ್, ವಿನೋದ ವಾಲ್ಮೀಕಿ, ಸರಸ್ವತಿ ನಾವುಡ, ಉಮೇಶ ಭದ್ರಾಪುರ, ರೇಣುಕಮ್ಮ ಗೌಳಿ, ಮಹೇಶ್ ಖಾರ್ವಿ, ರಮೇಶ ಮಂಚಿ, ರೂಪಾ ಮಧುಕೇಶ್ವರ, ಮಾಲತೇಶ, ಶೇಖರಮ್ಮ, ಶೈಲಜಾ ಹೆಬ್ಬಾರ್ ಸೇರಿ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-42-1706404243

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.