ಸೊರಬ: ಅಕಾಲಿಕ ಮಳೆ ಹಾಗೂ ಬಿಸಿಲಿನ ತಾಪವು ಅಡಿಕೆ ಮರಗಳ ಹಿಂಗಾರದ (ಹೊಂಬಾಳೆ) ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಪರಾಗಸ್ಪರ್ಶ ಪ್ರಕ್ರಿಯೆ ಸರಿಯಾಗಿ ನಡೆಯದೇ ಹಿಂಗಾರ ಕೊಳೆಯುತ್ತಿದೆ. ಇದರಿಂದ ಇಳುವರಿ ಕುಂಠಿತವಾಗುವ ಭೀತಿ ಶುರುವಾಗಿದೆ.

ತಾಲ್ಲೂಕಿನಲ್ಲಿ 26,088 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. ಹವಾಮಾನ ವೈಪರೀತ್ಯವು ಹಿಂಗಾರದ ನೈಸರ್ಗಿಕ ಪ್ರಕ್ರಿಯೆಯನ್ನೇ ಏರುಪೇರು ಮಾಡುತ್ತಿದೆ. ಒಂದೆಡೆ ಮೈಸುಡುವ ಬಿಸಿಲು ಇದೆ. ಇನ್ನೊಂದೆಡೆ ಒಂದೆರಡು ಬಾರಿ ಸುರಿದ ಅಕಾಲಿಕ ಮಳೆ ಅಡಿಕೆಗೆ ಮಾರಕವಾಗಿ ಪರಿಣಮಿಸಿವೆ.

‘ಬಿಸಿಲಿನ ನಡುವೆ ಸುರಿವ ಅಕಾಲಿಕ ಮಳೆಯು ತೋಟಗಳನ್ನು ತಂಪು ಮಾಡುವ ಬದಲು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಮಳೆ ಬಂದಾಗ ಹಿಂಗಾರದ ಸಿಪ್ಪೆಯ ನಡುವೆ ನೀರು ಸಂಗ್ರಹವಾಗುತ್ತದೆ. ಮರುದಿನವೇ ತೀವ್ರವಾದ ಬಿಸಿಲು ಬಿದ್ದಾಗ, ಆ ನೀರು ಬಿಸಿಯಾಗಿ ಹಿಂಗಾರದ ಮೃದುವಾದ ಅಂಗಾಂಶಗಳನ್ನು ಸುಟ್ಟು ಹಾಕುತ್ತದೆ. ಇದರಿಂದ ಹಿಂಗಾರವು ಅರಳುವ ಮುನ್ನವೇ ಕೊಳೆಯಲು ಆರಂಭಿಸುತ್ತದೆ. ಇದು ಇಳುವರಿಯ ಕುಸಿತಕ್ಕೆ ಕಾರಣವಾಗಬಹುದು’ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಹವಾಮಾನ ವೈಪರೀತ್ಯದ ಹೊಡೆತಕ್ಕೆ ಸಿಲುಕಿ ದುರ್ಬಲಗೊಂಡ ಹಿಂಗಾರಕ್ಕೆ ಶಿಲೀಂಧ್ರಗಳು ಬೇಗನೆ ಅಂಟಿಕೊಳ್ಳುತ್ತವೆ. ಇದು ಹಿಂಗಾರದ ತುದಿಯಿಂದ ಆರಂಭವಾಗಿ ಇಡೀ ಗೊಂಚಲನ್ನು ಕೊಳೆಯುವಂತೆ ಮಾಡುತ್ತದೆ. ಅಡಿಕೆ ಹೂವು ಕಾಯಿಯಾಗಲು 20 ಡಿಗ್ರಿ ಸೆಲ್ಸಿಯಸ್ನಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬೇಕು. ಆದರೆ ಈಗಿನ ತಾಪಮಾನ 35 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಇದರಿಂದ ಹಿಂಗಾರ ಕೊಳೆತು ಒಣಗುತ್ತಿವೆ’ ಎನ್ನುತ್ತಾರೆ ಅಧಿಕಾರಿಗಳು.

‘ಒಣಗಿರುವ ಹಿಂಗಾರವನ್ನು ತೆಗೆದು ತೋಟವನ್ನು ಸ್ವಚ್ಛವಾಗಿಸಬೇಕು. ಮಾನ್ಕೊಜೆಡ್ ಅಥವಾ ಅಲ್ಟ್ರಾಕೋಲ್ 2 ಗ್ರಾಂ ಪ್ರತಿ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಹಿಂಗಾರಗಳಿಗೆ ಸಿಂಪಡಿಸಬೇಕು. 15 ದಿನಗಳ ನಂತರ 19.19.19 ಹಾಗೂ 0.0.50 ಒಂದು ಕೆ.ಜಿಯಷ್ಟು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಹಿಂಗಾರಗಳಿಸಿ ಸಿಂಪಡಿಸುವುದರಿಂದ ಹತೋಟಿಗೆ ತರಬಹುದು’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ವೆಂಕಟೇಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-42-1055924423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.