ಸೊರಬ: ‘ಗಾಳಿ, ಮಳೆ ಹಾಗೂ ಬಿಸಿಲಿನಿಂದ ಹಾನಿಯಾಗುತ್ತಿರುವ ಪಟ್ಟಣದ ಪುರದೈವ ರಂಗನಾಥ ಸ್ವಾಮಿ ದೇವರ ನೂತನ ಬ್ರಹ್ಮರಥಕ್ಕೆ ತೇರು ಮನೆ ನಿರ್ಮಿಸಬೇಕು’ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಈಚೆಗೆ ಉಪತಹಶೀಲ್ದಾರ್ ಲಲಿತಾ ಅವರಿಗೆ ಮನವಿ ಸಲ್ಲಿಸಲಾಯಿತು.

‘ರಂಗನಾಥ ಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಭಕ್ತರ ಬಹುದಿನಗಳ ಕನಸಾದ ನೂತನ ಬ್ರಹ್ಮರಥ ನಿರ್ಮಾಣಗೊಂಡು ಪುರಪ್ರವೇಶವಾಗಿ ಈಚೆಗೆ ರಥೋತ್ಸವವೂ ವಿಜೃಂಭಣೆಯಿಂದ ಜರುಗಿದೆ. ಆದರೆ, ಮೂರು ದಿನಗಳಿಂದ ಗಾಳಿ ಸಹಿತ ಬಿರುಸಿನ ಮಳೆ ಸುರಿಯುತ್ತಿದ್ದು, ರಥಕ್ಕೆ ಹೊದಿಕೆಯಾಗಿ ಮುಚ್ಚಿದ್ದ ಟಾರ್ಪಲ್ ಕಿತ್ತು ಹೋಗಿದೆ. ಮಳೆ ನೀರಿನಿಂದ ರಥಕ್ಕೆ ಹಾನಿಯಾಗುತ್ತಿದೆ’ ಎಂದು ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ತಿಳಿಸಿದರು.

‘ಹಳೆಯ ರಥವು ಅಂದಾಜು 150 ವರ್ಷಗಳಷ್ಟು ಪುರಾತನವಾದುದು. ಅದು ಶಿಥಿಲವಾದ ನಂತರ ಶಿರಸಿಯ ಕಲಾವಿದರಿಂದ ಸುಂದರ ರಥ ನಿರ್ಮಿಸಲಾಗಿದ್ದು, ಅದರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಮಳೆ– ಗಾಳಿಗೆ ರಥವು ಸಿಲುಕಿದರೆ ಕನಿಷ್ಠ 20 ವರ್ಷವೂ ಬಾಳಿಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ದೇವಸ್ಥಾನದ ಸಮೀಪ ಸ್ಥಳವನ್ನು ಗುರುತಿಸಿ ಶೀಘ್ರವೇ ತೇರು ಮನೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ದೇವಸ್ಥಾನದ ಗೋಪುರ ಮತ್ತು ಗರ್ಭಗುಡಿ ಮಳೆ ಬಂದರೆ ಸೋರುತ್ತಿದೆ. ಗೋಪುರವು ಶಿಥಿಲಾವಸ್ಥೆಗೆ ತಲುಪಿದೆ. ಇದರ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಶೀಘ್ರವೇ ರಂಗನಾಥ ಸ್ವಾಮಿ ದೇವರ ನೂತನ ಬ್ರಹ್ಮರಥಕ್ಕೆ ತೇರುಮನೆ ನಿರ್ಮಿಸಬೇಕು’ ಎಂದು ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ, ಉಪಾಧ್ಯಕ್ಷ ದತ್ತಾ ಸೊರಬ, ಕರವೇ ಗಜಸೇನೆಯ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೇಶವ ಪೇಟ್ಕರ್, ಪ್ರಮುಖರಾದ ಗೋಪಾಲ ರಾಯನ್ ಕೊಡಕಣಿ, ರವಿ ನಾಡಿಗೇರ್, ಪ್ರವೀಣ್ ಬೆದವಟ್ಟಿ, ಟಿ.ಜಿ. ಬಸವರಾಜಪ್ಪ, ಎಂ. ಗಣಪತೆಪ್ಪ, ಜೆ.ಡಿ. ನಾಗರಾಜ, ವೆಂಕಟೇಶ್ ಶೇಟ್, ವಾಸುದೇವ, ಟಿ. ಕುಮಾರ್, ವಾಸು, ರಾಜಪ್ಪ, ರಾಘು ರಾಜೀವನಗರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-42-1000768327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.