ಸೊರಬ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಸೊರಬ ತಾಲ್ಲೂಕು ನಾಲ್ಕನೇ ಸ್ಥಾನ ಪಡೆದಿದ್ದು, ಶೇ 96.77ರಷ್ಟು ಫಲಿತಾಂಶದೊಂದಿಗೆ ಕಳೆದ ಬಾರಿಗಿಂತ ಸುಧಾರಣೆ ಕಂಡುಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ ತಿಳಿಸಿದರು.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ಪರೀಕ್ಷೆಗೆ ಹಾಜರಾಗಿದ್ದ 2,568 ವಿಧ್ಯಾರ್ಥಿಗಳ ಪೈಕಿ 2,483 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲ್ಲೂಕಿನ 19 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಸರ್ಕಾರಿ ಶಾಲೆ 8, ವಸತಿ ಶಾಲೆ 3, ಅನುದಾನಿತ 5 ಹಾಗೂ ಅನುದಾನರಹಿತ 3 ಶಾಲೆಗಳಿಗೆ ನೂರರಷ್ಟು ಫಲಿತಾಂಶ ದೊರೆತಿದೆ.

ಆನವಟ್ಟಿಯ ಸ್ಯಾಂಥ್ ಹೋಮ್ ಆಂಗ್ಲ ಮಾಧ್ಯಮ ಶಾಲೆಯ ಯಶವಂತ್ ಎಸ್. (618) ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಸ್ವಾಮಿ ವಿವೇಕಾನಂದ ಶಾಲೆಯ ರಾಹುಲ್ ಧರ್ಮಪ್ಪ (616) ದ್ವಿತೀಯ ಹಾಗೂ ಐಜಿಆರ್ಎಸ್ ವಸತಿ ಶಾಲೆಯ ಧನುಷ್ ಕೆ. (614) ತೃತೀಯ ಸ್ಥಾನ ಪಡೆದಿದ್ದಾನೆ.

ಇಲಾಖೆಯ ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಂಜೆ ಹಾಗೂ ಬೆಳಿಗ್ಗೆ ವಿಶೇಷ ತರಗತಿ ನಡೆಸಿದ್ದರು. ವಿದ್ಯಾರ್ಥಿಗಳ ಗುಂಪು ನಿರ್ಮಿಸಿ ಕಲಿಕಾ ಚಟುವಟಿಕೆಗೆ ಒತ್ತು ನೀಡಲಾಗಿತ್ತು ಎಂದು ಆರ್. ಪುಷ್ಪಾ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-42-1797558744

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.