ಆನವಟ್ಟಿ: ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ಸಂಕುಲಕ್ಕೆ ಕಂಟಕವಾಗಿರುವ ಕಲ್ಲು ಗಣಿಗಾರಿಕೆ ಕಾನೂನುಬಾಹಿರವಾಗಿ ನಡೆಯುತ್ತಿದೆ. ತಕ್ಷಣವೇ ಗಣಿಗಾರಿಕೆ ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿ ಎಣ್ಣೆಕೊಪ್ಪ, ತೆವರತೆಪ್ಪ, ಬೆಲವಂತನಕೊಪ್ಪದ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಡಿಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ವಿಠ್ಠಲ ದೇವಸ್ಥಾನದಿಂದ ಬಸ್ ನಿಲ್ದಾಣ ಮಾರ್ಗವಾಗಿ ಜಾಥಾ ನಡೆಸಿ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಕಾರರು ಕಲ್ಲು ಗಣಿಗಾರಿಕೆ ನಿಲ್ಲುಸುವಂತೆ ಘೋಷಣೆಗಳನ್ನು ಕೂಗಿದರು. ನಂತರ ಸಭೆ ನಡೆಸಿ, ಉಪ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಮುಖಂಡ ಕಡ್ಲೇರ್ ರುದ್ರಪ್ಪ ಮಾತನಾಡಿ, ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ರಾತ್ರಿ-ಹಗಲೆನ್ನದೇ ಸ್ಫೋಟ ಮಾಡಲಾಗುತ್ತಿದೆ. ಇದರಿಂದಾಗಿ ವಾತಾವರಣ ಕಲುಷಿತಗೊಂಡಿದೆ. ವಿಷಯುಕ್ತ ದೂಳು ಕೆರೆ ಹಾಗೂ ಬೆಳೆಗಳನ್ನು ಸೇರುತ್ತಿದೆ. ಪಕ್ಷಿ, ಜನ, ಜಾನುವಾರಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಗಾಳಿ ಸಿಗದೇ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಆರೋಪಿಸಿದರು.

ಗರ್ಭಿಣಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಿ, ಅವಧಿಗೂ ಮುನ್ನ ಹೆರಿಗೆಗಳಾಗುತ್ತಿವೆ. ರಕ್ತಸ್ರಾವ, ಉಸಿರಾಟದ ತೊಂದರೆ ಆಗುತ್ತಿದೆ. ಬಾಣಂತಿಯರು, ವೃದ್ಧರು, ಹೃದಯ ಸಂಬಂಧಿ ಕಾಯಿಲೆ ಇರುವವರು ಜೀವಭಯದ ಜೊತೆಗೆ ಮಾನಸಿಕ ಒತ್ತಡ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಣಿಗಾರಿಕೆ ನಡೆಯುತ್ತಿರುವ ಎಣ್ಣೆಕೊಪ್ಪ ಪಂಚಾಯಿತಿಯ ಸರ್ವೇ ನಂಬರ್ 60, 100, 128 ದನದ ಮುಫತ್ತು ಆಗಿದ್ದು, ಇಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಸರ್ಕಾರದ ನಿಯಮದಂತೆ 100 ಜಾನುವಾರುಗಳಿಗೆ 30 ಎಕರೆ ಜಮೀನು ಮೀಸಲಿಡಬೇಕು. ಆದರೆ ಈ ಪ್ರದೇಶದಲ್ಲಿ 498 ಜಾನುವಾರುಗಳಿದ್ದು, 150 ಎಕರೆ ಜಮೀನು ಮೀಸಲಿಡಬೇಕಿದೆ ಎಂದು ಮಾಹಿತಿ ನೀಡಿದರು.

ಕಲ್ಲು ಗಣಿಗಾರಿಕೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಹೊನ್ನಪ್ಪ ಎಣ್ಣೆಕೊಪ್ಪ, ಮಂಜಪ್ಪ ಹಿತ್ತಲಮನೆ, ಜಗದೀಶಪ್ಪ ತೆವರೆತೆಪ್ಪ, ಸುರೇಶಪ್ಪ ಹುಳ್ಳೇರ್, ಟಿ.ಆಂಜನೇಯ, ಮಂಜು ಎಲೆಗಾರ್, ಶರಣಪ್ಪ, ಯುವರಾಜ ಗೌಡ, ಟಿಪಿಎಸ್ ಮಂಜು, ಡಿಎಸ್ಎಸ್ ಮಹೇಶ್, ಉಮೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.