ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂತ್ರಿಕ ದೋಷ: ಮುಪ್ಪಾನೆ ಲಾಂಚ್ ಸ್ಥಗಿತ

Published : 8 ಸೆಪ್ಟೆಂಬರ್ 2024, 16:19 IST
Last Updated : 8 ಸೆಪ್ಟೆಂಬರ್ 2024, 16:19 IST
ಫಾಲೋ ಮಾಡಿ
Comments

ತುಮರಿ: ಕರೂರು ಹೋಬಳಿಯಿಂದ ಕಾರ್ಗಲ್, ಜೋಗಕ್ಕೆ ಸಂಪರ್ಕ ಕಲ್ಪಿಸುವ ಹಲ್ಕೆ-ಮುಪ್ಪಾನೆ ಕಡವು ಮಾರ್ಗವು ತಾಂತ್ರಿಕ ದೋಷದ ಕಾರಣ ಭಾನುವಾರದಿಂದ ಮತ್ತೆ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.

ನಿರಂತರ ಮಳೆಯಿಂದಾಗಿ ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೂಕ್ತ ಪ್ಲಾಟ್ ಫಾರ್ಮ್ ಇಲ್ಲದೆ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಮಣ್ಣಿನ ಮೇಲೆ ಲಾಂಚ್ ನಿಲುಗಡೆ ಮಾಡುವಾಗ ಮರದ ದಿಮ್ಮಿಗಳೂ ಪದೇ ಪದೇ ಲಾಂಚಿನ ಫ್ಯಾನ್ ತಳಭಾಗಕ್ಕೆ ಸಿಲುಕಿ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುತ್ತಿದೆ. ಅಲ್ಲದೇ ಲಾಂಚ್ ನಿರ್ವಹಣೆ ತಾಂತ್ರಿಕ ತಜ್ಞರು ಇಲಾಖೆಯಲ್ಲಿ ಇಲ್ಲದಿರುವುದರಿಂದ ಸದ್ಯ ಇನ್ನು 2 ದಿನ ಲಾಂಚ್ ಸೇವೆ ಪುನನರ್‌ ಆರಂಭ ಕಷ್ಟ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಮುಪ್ಪಾನೆ ಲಾಂಚ್ ನಿರಂತರವಾಗಿ ತಾಂತ್ರಿಕ ದೋಷಕ್ಕೆ ಒಳಗಾಗುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕರೂರು ಹೋಬಳಿಯ ಜನರು ದೂರಿದ್ದಾರೆ.

ಈಗಾಗಲೇ ಲಾಂಚ್ ಬಿಡಿ ಭಾಗಗಳನ್ನು ತೆಗೆದು ಸಾಗರಕ್ಕೆ ಕಳುಹಿಸಲಾಗಿದೆ. ಶ್ರೀಘವೇ ಲಾಂಚ್ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT