ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳ ಕಾರ್ಯಕರ್ತನ ಹತ್ಯೆ: ಶಿವಮೊಗ್ಗ ಪ್ರಕ್ಷುಬ್ಧ: ಅಲ್ಲಲ್ಲಿ ಕಲ್ಲು ತೂರಾಟ

Last Updated 21 ಫೆಬ್ರುವರಿ 2022, 8:42 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಶ್ವ ಹಿಂದೂ ಪರಿಷತ್‌, ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗ ನಗರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಒಂದು ಕೋಮಿನ ಜನರನ್ನು ಗುರಿಯಾಗಿಟ್ಟುಕೊಂಡು ಕೆಲವು ಕಡೆ ಕಲ್ಲುತೂರಾಟ ನಡೆದಿದೆ. ಬೈಕ್‌ಗಳಿಗೆ ಬೆಂಕಿ ಹಚ್ಚಲಾಗುತ್ತಿದೆ.

ಕಲ್ಲುತೂರಾಟದಿಂದ ಪತ್ರಕರ್ತರೂ ಸೇರಿ ಹಲವರಿಗೆ ಗಾಯಗಳಾಗಿವೆ. ಕೆಲವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಜಾದ್‌ ನಗರ, ಬಿ.ಬಿ.ರಸ್ತೆ, ಸೀಗೆಹಟ್ಟಿ, ಆರ್‌ಎಂಎಲ್‌ ನಗರಗಳಲ್ಲಿ ಕಲ್ಲು ತೂರಾಟ ನಡೆದಿದೆ. ಗುಂಪು ಚದುರಿಸಲು ಪೊಲೀಸರು ಹರ ಸಾಹಸ ನಡೆಸುತ್ತಿದ್ದಾರೆ. ಒಂದು ಭಾಗದಲ್ಲಿ ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಮತ್ತೊಂದು ಭಾಗಕ್ಕೆ ಗಲಭೆ ಹಬ್ಬುತ್ತಿದೆ.

ಮೆರವಣಿಗೆಗೆ ಪಟ್ಟು: ಬಜರಂಗದಳ, ವಿಶ್ವಹಿಂದೂ ಪರಿಷತ್‌ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆಗ್ಗಾನ್‌ ಶವಾಗಾರದ ಮುಂದೆ ಜಮಾಯಿಸಿದ್ದಾರೆ. ಪಾಎರ್ಥಿವ ಶರೀರದ ಮೆರವಣಿಗೆಗೆ ಪಟ್ಟು ಹಿಡಿದರು. ಪೊಲೀಸರು ಅನುಮತಿ ನೀಡದ ಕಾರಣ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಗೃಹ ಸಚಿವ ಆರಗ ಭರವಸೆ: ಶವಾಗಾರಕ್ಕೆ ಭೇಟಿ ನೀಡಿ ಹರ್ಷನ ಮೃತದೇಹ ವೀಕ್ಷಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT