ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ: ವಿಜೃಂಭಣೆಯ ಹುಚ್ಚರಾಯಸ್ವಾಮಿ ತೆಪ್ಪೋತ್ಸವ

ಹುಚ್ಚರಾಯನ ಕೆರೆಯಲ್ಲಿ ಸಿಡಿಮದ್ದಿನ ಆರ್ಭಟದೊಂದಿಗೆ ನೆರವೇರಿದ ಉತ್ಸವ
Last Updated 18 ಏಪ್ರಿಲ್ 2022, 6:33 IST
ಅಕ್ಷರ ಗಾತ್ರ

ಶಿಕಾರಿಪುರ: ಸುರಿವ ಮಳೆಯ ಮಧ್ಯೆ ಪಟ್ಟಣದ ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಪ್ರಯುಕ್ತ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ಹುಚ್ಚರಾಯ ಸ್ವಾಮಿ ಕೆರೆಯಲ್ಲಿ ಭಾನುವಾರ ಹುಚ್ಚರಾಯಸ್ವಾಮಿ ದೇವರ ತೆಪ್ಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದನೆರವೇರಿತು.

ತೆಪ್ಪೋತ್ಸವ ಪ್ರಯುಕ್ತಹುಚ್ಚರಾಯಸ್ವಾಮಿ ದೇವಸ್ಥಾನದಿಂದ ದೇವರ ಉತ್ಸವ ಮೂರ್ತಿಯನ್ನು ಹುಚ್ಚರಾಯಸ್ವಾಮಿ ಕೆರೆಗೆ ಪಲ್ಲಕ್ಕಿ ಮೂಲಕ ಭಕ್ತರು ಹೊತ್ತು ತಂದರು. ನಂತರ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್. ಹೊನ್ನಾಳಿ, ಸಾಗರ ಉಪವಿಭಾಗಾಧಿಕಾರಿ ಡಾ.ನಾಗರಾಜ್ ನಾಯ್ಕ್ ಹಾಗೂ ತಹಶೀಲ್ದಾರ್‌ ಎಂ.ಪಿ. ಕವಿರಾಜ್ ಚಾಲನೆ ನೀಡಿದರು.

ಉತ್ಸವಮೂರ್ತಿಯನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಿದ ತೆಪ್ಪದ ಮೂಲಕ ಮೆರವಣಿಗೆ ಮಾಡಲಾಯಿತು. ಉತ್ಸವಮೂರ್ತಿ ಸಂಚರಿಸುವಾಗ ಆಕಾಶದಲ್ಲಿ ವಿವಿಧ ಬಣ್ಣ ಮೂಡಿಸುವ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಬ್ರಹ್ಮರಥೋತ್ಸವ ಪ್ರಯುಕ್ತ ಹುಚ್ಚರಾಯನಕೆರೆ ಹಾಗೂ ಭ್ರಾಂತೇಶ್ ಉದ್ಯಾನವನ್ನು ಅಲಂಕರಿಸಲಾಗಿತ್ತು.

ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಾಸ್ವಾಮಿ, ತೀರ್ಥಹಳ್ಳಿ ತಹಶೀಲ್ದಾರ್ ಶ್ರೀಪಾದ್, ಉಪತಹಶೀಲ್ದಾರ್ ಮಂಜುನಾಥ್, ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT