ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ್ ಅಭಿನಯದ ‘ಗುರು–ಶಿಷ್ಯರು‘: ಕೊಕ್ಕೊ ಕ್ರೀಡೆ ಮೇಲೆ ಸಿನಿಮಾ

Last Updated 18 ಸೆಪ್ಟೆಂಬರ್ 2022, 7:05 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಗುರು–ಶಿಷ್ಯರು ಕನ್ನಡದಲ್ಲಿ ಕೊಕ್ಕೊ ಕ್ರೀಡೆ ಮೇಲೆ ನಿರ್ಮಾಣವಾದ ಚಿತ್ರ. ಮೊದಲ ಬಾರಿ ವಿಭಿನ್ನ ಕಥಾ ಹಂದರ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ನಟ ಶರಣ್‌ ಹೇಳಿದರು.

ಶನಿವಾರ ನಡೆದ ಗುರು–ಶಿಷ್ಯರು ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಶ್ಚಾತ್ಯ ಆಟಗಳಿಂದಾಗಿ ನಮ್ಮ ನೆಲದ ದೇಶಿ ಆಟಗಳು ಮಹತ್ವ ಕಳೆದುಕೊಂಡಿವೆ. ನಮ್ಮ ನೆಲದ ಕೊಕ್ಕೊ ಆಟ ಕೇಂದ್ರವಾಗಿಟ್ಟುಕೊಂಡು ಭಾವನಾತ್ಮಕ ಎಳೆಗಳೊಂದಿಗೆ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿಮನೋಹರ ಎಂಬ ಪಾತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು,ಹಳ್ಳಿ ಮಕ್ಕಳಿಗೆ ಕೊಕ್ಕೊ ಕಲಿಸುವ ದೈಹಿಕ ಶಿಕ್ಷಣ ಶಿಕ್ಷಕನಾಗಿ ಅಭಿನಯಿಸಿದ್ದೇನೆ’ ಎಂದರು.

‘ಚಿತ್ರದಲ್ಲಿ ಮಕ್ಕಳು ತುಂಬಾ ಪರಿಶ್ರಮದಿಂದ ಕೆಲಸ ಮಾಡಿದ್ದಾರೆ. ಡೂಪ್‌ ಇಲ್ಲದೇ ಡೈವ್‌ ಹೊಡೆದಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ತಿಳಿಸಿದರು.

‘ಚಿತ್ರದಲ್ಲಿ ಸೂಜಿ ಎಂಬ ಪಾತ್ರ ನನ್ನದು.ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಈ ಪಾತ್ರ ಸವಾಲಿನಿಂದ ಕೂಡಿತ್ತು’ ಎಂದುನಟಿ ನಿಶ್ವಿಕಾ ನಾಯ್ಡು ಹೇಳಿದರು.

ಚಿತ್ರ ಸೆಪ್ಟೆಂಬರ್‌ 23ರಂದು ತೆರೆ ಕಾಣಲಿದೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಶರಣ್‌ ಹಾಗೂ ತರುಣ್‌ ಸುಧೀರ್‌ ಅವರ ಲಡ್ಡು ಸಿನಿಮಾ ಹೌಸ್‌ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್‌ ಬ್ಯಾನರ್‌ ಅಡಿ ಚಿತ್ರ ನಿರ್ಮಾಣವಾಗಿದೆ.

ಹಾಸ್ಯ ನಟ ಮಹಾಂತೇಶ, ಕೊಕ್ಕೊ ಕ್ರೀಡಾಪಟುಗಳಾಗಿ ನಟಿಸಿರುವ ಏಕಾಂತ್, ರುದ್ರ, ಉದಯ್, ಹರ್ಷಿತ್‌, ರಕ್ಷಕ್, ಮಣಿಕಂಠ, ಸೂರ್ಯ, ನಟೇಶ್‌, ಸಂದೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT