ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ: ಸರಣಿ ಕಳವು; ಜನರಲ್ಲಿ ಆತಂಕ

Published 20 ಆಗಸ್ಟ್ 2024, 15:58 IST
Last Updated 20 ಆಗಸ್ಟ್ 2024, 15:58 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ನಗರ ಭಾಗದಲ್ಲಿ ಸರಣಿ ಕಳವು ಯತ್ನ ಮತ್ತು ಕಳವು ಪ್ರಕರಣಗಳು ನಡೆಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಆ. 14 ರಂದು ಕಾನುಗೋಡು ರಾಮಕೃಷ್ಣ ಅವರ ಮನೆಯಲ್ಲಿ ಕಳವು ನಡೆದಿದ್ದು, ₹ 1.36 ಲಕ್ಷ ಮೌಲ್ಯದ ಚಿನ್ನಾಭರಣ, ₹ 4,000 ಮೌಲ್ಯದ ಬೆಳ್ಳಿಯ ವಸ್ತುಗಳು ಕಳುವಾಗಿದ್ದು, ಪ್ರಕರಣ ದಾಖಲಾಗಿದೆ.

ಅದೇ ದಿನ ಮಾಸ್ತಿಕಟ್ಟೆ ಸಮೀಪದ ಕಿಲಗಾರು ನಿವಾಸಿ ಸುಜಯ ಗೋಪಾಲ ಅವರ ಮನೆಯಲ್ಲೂ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.

ಕದ್ದ ಮಾಲು ವಾಪಸ್: ನಗರ– ಮಾಸ್ತಿಕಟ್ಟೆ ಮಾರ್ಗದ ಮುಂಡಳ್ಳಿ ಸಮೀಪದ ಪುಟ್ಟಕ್ಕ ಅವರ ಮನೆಯಲ್ಲಿ ಕಳವು ಮಾಡಿದ ಘಟನೆ ಭಾನುವಾರ ನಡೆದಿದೆ. ಬಂಗಾರದ ಓಲೆ, ಉಂಗುರ ಮತ್ತು‌ ನಗದು ಕಳವು ಮಾಡಲಾಗಿದೆ. ಇದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದಂತೆ ಸೋಮವಾರ ಬೆಳಿಗ್ಗೆ ಪುಟ್ಟಕ್ಕನ ಮನೆ ಗೇಟ್ ಮುಂಭಾಗ ಕದ್ದ ಮಾಲನ್ನು ವಾಪಸ್‌ ಇಟ್ಟು ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಾಡಹಗಲೇ ಘಟನೆ: ಕಿಲಗಾರು, ಕಾನುಗೋಡು, ಮುಂಡಳ್ಳಿ ಸೇರಿ ಇನ್ನೂ ಕೆಲವು ಪ್ರಕರಣಗಳು ಹಾಡಹಗಲೇ‌ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ. ಕೂಲಿ ಕಾರ್ಮಿಕರ ಮನೆಯನ್ನೇ ಕಳವಿಗಿ ಗುರಿಯಾಗಿಸಿಕೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳವು ಯತ್ನ ಮಾಡಲಾಗುತ್ತಿದೆ. 

ಕಳವು ಪ್ರಕರಣ ತಡೆಗಟ್ಟಲು ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳವನ್ನು ಕರೆಯಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಯಕಟ್ಟು ಜಾಗಗಗಳಲ್ಲಿ‌ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸದಿರುವುದು ಪ್ರಕರಣ ಭೇದಿಸಲು ಹಿನ್ನೆಡೆಯಾಗಿದೆ. 

ನಗರ ಠಾಣೆ ಪಿಎಸ್ಐ ಶಿವಾನಂದ ಕೋಳಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT