ತೀರ್ಥಹಳ್ಳಿ: ‘ಸಾಮಾಜಿಕ ವ್ಯವಸ್ಥೆ ಒಪ್ಪಿತ ಶೋಷಣೆಗೆ ಸಿಲುಕಿಕೊಂಡಿದೆ. ದೇಶದಾದ್ಯಂತ ಅಹಿಂದ ವರ್ಗ ಸಂಘಟಿತವಾಗದಂತೆ ತಡೆಯಲಾಗುತ್ತಿದೆ. ಅಹಿಂದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ’ ಎಂದು ಉಪನ್ಯಾಸಕ ಸಚಿನ್ ಜಿ. ಹಿಳ್ಳೋಡಿ ಹೇಳಿದರು.

‘ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರು ಸಮುದಾಯಕ್ಕೆ ವಿಭಿನ್ನ ಕೊಡುಗೆಗಳನ್ನು ನೀಡಿದ್ದಾರೆ. ಅವರ ಶ್ರಮದ ಫಲವಾಗಿ ಸಾಕಷ್ಟು ಸುಧಾರಣೆಯಾಗಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ’ ಎಂದು ಸೋಮವಾರ ನಡೆದ ಮಲೆನಾಡು ಅಹಿಂದ ಸಂಘಟನಾ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಸಾಮಾಜಿಕ ಕ್ರಾಂತಿಗೆ ಮುಂದಾದವರನ್ನು ಹತ್ಯೆ ಮಾಡಲಾಗಿದೆ. ಅಂತಹ ಬೆದರಿಕೆಗಳಿಗೆ ನಾವು ಬಗ್ಗುವವರಲ್ಲ. ಪ್ರಬಲ ವರ್ಗದ ದಬ್ಬಾಳಿಕೆಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗದ ಸ್ಥಿತಿ ಈಗಲೂ ಇದೆ. ಸಮುದಾಯಗಳ ಶೋಷಣೆಯ ಸ್ವರೂಪ ಬದಲಾಗಿದೆ. ಆದರೆ ದೇಶ ಇನ್ನೂ ಬದಲಾಗಿಲ್ಲ. ಈಗ ರಾಜಕಾರಣ ಉದ್ಯಮಿಗಳ ನಿಯಂತ್ರಣದಲ್ಲಿದ್ದು, ಪ್ರಜಾತಂತ್ರ ಕೇವಲ ಹೆಸರಿಗಷ್ಟೇ ಎಂಬಂತಾಗಿದೆ’ ಎಂದು ದೂರಿದರು.

‘ತೀರ್ಥಹಳ್ಳಿಯಲ್ಲಿ ಅಹಿಂದಾ ಮತಗಳ ಸಂಖ್ಯೆ ಶೇ 80 ರಷ್ಟಿದೆ. ಜಾತಿಗಳ ಒಡಕಿನಿಂದ ನಾವೆಲ್ಲಾ ಮೇಲೆ ಬರಬೇಕು. ನಾವು ರಾಜಕೀಯ ಪಕ್ಷಗಳ ಕೈಗೊಂಬೆಗಳಾಗಬಾರದು’ ಎಂದು ಸಂಘಟನೆಯ ಅಧ್ಯಕ್ಷ ಸಚಿನ್ ಗರಗ ಹೇಳಿದರು.

ಪ್ರಮುಖರಾದ ಎಸ್.ಟಿ. ದೇವರಾಜ್, ಪ್ರತ್ತಬ್ಬ, ಶ್ರೀಧರ್ ಮೂರ್ತಿ, ಅಬೀದ್ ಕುಡುಮಲ್ಲಿಗೆ, ಅಬೂಬಕ್ಕರ್, ಪ್ರಶಾಂತ್, ನಾಗರಾಜ್, ಸೂರ್ಯ ನಾರಾಯಣ ಚಿಡುವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260317-42-363790711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.