₹ 34 ಕೋಟಿ ಆಯವ್ಯಯ ಮಂಡನೆ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ ₹ 1.14 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು.
ಒಟ್ಟು ₹ 34.8 ಕೋಟಿ ವೆಚ್ಚದ ಬಜೆಟ್ ಲೆಕ್ಕಾಚಾರ ನೀಡಿದರು. ಆರಂಭಿಕ ಶಿಲ್ಕು 12.93 ಕೋಟಿ, ಒಟ್ಟು ಜಮೆ 21.88 ಕೋಟಿ, ಖರ್ಚು ₹ 33.67 ಕೋಟಿ ತೋರಿಸಿದ್ದಾರೆ. ಪ.ಪಂ. ಅಧೀನಕ್ಕೆ ಒಳಪಟ್ಟ ನಿವೇಶನಗಳ ಮಾರಾಟದಿಂದ ₹ 4 ಕೋಟಿ ನಿರೀಕ್ಷಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಯಿಂದ ₹ 5 ಕೋಟಿಗೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.