ತೀರ್ಥಹಳ್ಳಿ: ‘ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಮುಕ್ತ ಆಹಾರ ಹುಡುಕಾಟ ದೊಡ್ಡ ಸವಾಲಾಗಿ ಪರಿಣಮಿಸಿದೆ. ರುಚಿಗಾಗಿ ಪೌಡರ್ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

ಈಚೆಗೆ ಕ್ಯಾನ್ಸರ್ನಿಂದ ಮೃತಪಟ್ಟ ರಾಷ್ಟ್ರಮಟ್ಟದ ಕೊಕ್ಕೊ ಆಟಗಾರ್ತಿ ಅಚಲ ಹೆಗ್ಡೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತೀರ್ಥಹಳ್ಳಿ ಭಾಗದ ಪ್ರತಿ 10 ಮನೆಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಡುತ್ತಿದೆ. ಅಡಿಕೆ ಬಗ್ಗೆ ಪರಿಶೀಲಿಸಿದಾಗ ಅಂತಹ ಯಾವುದೇ ಅಡ್ಡಪರಿಣಾಮದ ಸುಳಿವು ಸಿಗಲಿಲ್ಲ. ಬದಲಾಗಿ ಅಡುಗೆ, ಆಹಾರ, ಜಂಕ್ಫುಡ್ ಮೇಲೆ ಅನುಮಾನ ಮೂಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ಮಲೆನಾಡು ವಾತಾವರಣ ಆರೋಗ್ಯಕ್ಕೆ ಪೂರಕ ಎಂಬ ನಂಬಿಕೆ ದೂರವಾಗುತ್ತಿದೆ. ನಮ್ಮ ತರಕಾರಿ, ಎಣ್ಣೆ ವಿಷವಾಗಿವೆ. ತಜ್ಞ ವೈದ್ಯರಿಂದಲೂ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

‘50 ವರ್ಷದ ಮಹಿಳೆಯರಲ್ಲಿ ಪಿತ್ತಕೋಶದ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಲಕ್ಷಣವಿಲ್ಲದ ಕಾಯಿಲೆಯಾದ್ದರಿಂದ ಆರಂಭದಲ್ಲಿ ಪತ್ತೆಯಾಗುವುದಿಲ್ಲ’ ಎಂದು ಅಚಲ ಹೆಗ್ಡೆ ಪುತ್ರ ಡಾ.ಸಾರ್ಥಕ್ ಕೆ.ಎಸ್. ಹೆಗ್ಡೆ ಹೇಳಿದರು.

ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ. ವಿನಯ ಶ್ರೀನಿವಾಸ್, ಪ್ರಮುಖರಾದ ಪ್ರಕಾಶ್, ಅನ್ನಪೂರ್ಣ, ನಾಗರಾಜ್, ಚೇತನ ಶ್ರೀಕಾಂತ್ ನುಡಿನಮನ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-42-90167745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.